ಫಿಫಾ ವಿಶ್ವಕಪ್ನಲ್ಲಿ ಆತಿಥೇಯ ಕತಾರ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ (2010) ಹೊರತುಪಡಿಸಿ ಯಾವುದೇ ಆತಿಥೇಯ ರಾಷ್ಟ್ರ ಲೀಗ್ ಹಂತದಲ್ಲೆ ಸೋತು ಹೊರಬಿದ್ದಿಲ್ಲ
ಶುಕ್ರವಾರ ಅಲ್ ತುಮಾಮಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕತಾರ್ ತಂಡ ನಿರ್ಣಾಯಕ ಪಂದ್ಯದಲ್ಲಿ 1-3 ಗೋಲುಗಳಿಂದ ಸೋಲು ಕಂಡು ನಿರಾಸೆ ಅನುಭವಿಸಿತು.
ಈ ಗೆಲುವಿನ ಮೂಲಕ ಸೆನೆಗಲ್ ತಂಡ ಟೂರ್ನಿಯಲ್ಲಿ ಜೀವಂತವಾಗಿರಿಸಿಕೊಂಡಿತು.
ಸೆನಗಲ್ ತಂಡದ ಪರ ಬೊಲಾಯೆ ದಿಯಾ (41ನೇ ನಿಮಿಷ), ಫಮರ ದಿಯೆದಿಯೊ (48ನೇ ನಿಮಿಷ), ಚೀಕ್ ಡೆಂಗ್ (84ನೇ ನಿಮಿಷ), ಗೋಲುಗಳನ್ನು ಹೊಡೆದರು. ಕತಾರ್ ತಂಡದ ಪರ ಮೊಹ್ಮದ್ ಮುಂತರಿ 78ನೇ ನಿಮಿಷದಲ್ಲಿ ಗೋಲು ಹೊಡದರು.
ಮೊದಲ ಅವಧಿಯಲ್ಲಿ ಆತಿಥೇಯ ಕತಾರ್ ಆಕ್ರಮಣಕಾರಿ ಆಟವಾಡಿ ಗೋಲು ಹೊಡೆಯುವ ಪ್ರಯತ್ನ ಮಾಡಿತ್ತಾದರೂ ಸಫಲವಾಘಲಿಲ್ಲ. ಕತಾರ್ ತಂಡದ ಡಿಫೆಂಡರ್ ಬೌಲೆಮ್ ಕುವಾಕಿ ಮಾಡಿದ ತಪ್ಪಿನ ಲಾಭ ಪಡೆದ ಸೆನಗಲ್ಗೆ ಮೊದಲ ಗೋಲು ದಾಖಲಿಸಲು ನೆರವಾಯಿತು.
ಎರಡನೆ ಅವಧಿ ಆರಂಭದಲ್ಲೆ ಕತಾರ್ ತಂಡದ ಕುವಾಕಿ ಮಾಡಿದ ಯಡವಟ್ಟಿನಿಂದ ಆರಂಭದಲ್ಲೆ ಸೆನೆಗಲ್ ಗೋಲು ಬಾರಿಸಿತು.