ಫಿಫಾ ವಿಶ್ವಕಪ್ನ ಎ ಗುಂಪಿನ ಪಂದ್ಯದಲ್ಲಿ ಈಕ್ವೆಡಾರ್ ಹಾಗೂ ನೆದರ್ಲೆಂಡ್ ನಡುವಿನ ಕದನ ಡ್ರಾನಲ್ಲಿ ಅಂತ್ಯ ಕಂಡಿದೆ.
ದೋಹಾದ ಖಲೀಫಾ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ನೆದರ್ಲೆಂಡ್ ಹಾಗೂ ಈಕ್ವೆಡಾರ್ ತಂಡಗಳು ಡ್ರಾಗೆ ತೃಪ್ತಿಪಟ್ಟವು. ಪಂದ್ಯದ ಆರನೆ ನಿಮಿಷದಲ್ಲಿ ನೆದರ್ಲೆಂಡ್ನ ಕೋಡಿ ಗಾಕ್ ಪೋ ಗೋಲು ಹೊಡೆದರು. ಈ ಗೋಲಿನೊಂದಿಗೆ ನೆದರ್ಲೆಂಡ್ ಮೊದಲ ಅವಧಿಯಲ್ಲಿ 1-0 ಮುನ್ನಡೆ ಪಡೆಯಿತು.
ಎಚ್ಚೆತ್ತು ಎರಡನೆ ಅವಧಿಯಲ್ಲಿ ಕಣಕ್ಕಿಳಿದ ಈಕ್ವೆಡಾರ್ 49ನೇ ನಿಮಿಷದಲ್ಲಿ ಎನ್ನೆರ್ ವೆಲೆನ್ಸಿಯ ಗೋಲು ಹೊಡೆದು ಸಮಗೊಳಿಸಿದರು.

ಎನ್ನೆರ್ ಈ ವಿಶ್ವಕಪ್ನಲ್ಲಿ ಮೂರನೆ ಗೋಲು ಹೊಡೆದು ಮಿಂಚಿದರು.
ನಂತರ ಉಭಯ ತಂಡಗಳು ಗೋಲು ಹೊಡೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ಇದರೊಂದಿಗೆ ಈಕ್ವೆಡಾರ್,ನೆದರ್ಲೆಂಡ್ಸ್ ಮುಂದಿನ 16ರ ಹಂತಕ್ಕೆ ಹೋಗುವುದು ಸುಲಭವಾಗಿದೆ. ಎರಡೂ ತಂಡಗಳು ತಲಾ ನಾಲ್ಕು ಅಂಕಗಳನ್ನ ಪಡೆದಿವೆ.