ಪ್ರಿಕ್ವಾರ್ಟರ್ನಲ್ಲಿ ಇಂದು ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಪೋಲೆಂಡ್ ತಂಡವನ್ನು ಎದುರಿಸಲಿದೆ.
ಮೊನ್ನೆ ಟ್ಯುನೀಶಿಯಾ ವಿರುದ್ಧ ಸೋತು ಆಘಾತ ಅನುಭವಿಸಿತ್ತು. 1934ರ ವಿಶ್ವಕಪ್ನಲ್ಲಿ ಫ್ರಾನ್ಸ್ ಪ್ರಿಕ್ವಾರ್ಟರ್ನಲ್ಲಿ ಸೋತಿತ್ತು.
ಪೋಲೆಂಡ್ ತಂಡ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಸೋಲು ಕಂಡಿತ್ತು. 1986ರಲ್ಲಿ ಕೊನೆಯ ಬಾರಿಗೆ ಪೋಲೆಂಡ್ ಪ್ರಿಕ್ವಾರ್ಟರ್ ಆಡಿತ್ತು.
ಇಂಗ್ಲೆಂಡ್ಗೆ ಸೆನೆಗಾಲ್ ಸವಾಲು
ಬಲಿಷ್ಠ ಇಂಗ್ಲೆಂಡ್ ತಂಡ ಇಂದು ಸೆನೆಗಲ್ ತಂಡವನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಆಂಗ್ಲರು ಸೆನೆಗಲ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.
2010ರ ವಿಶ್ವಕಪ್ನ ಪ್ರಿಕ್ವಾರ್ಟರ್ನಲ್ಲಿ ಇಂಗ್ಲೆಂಡ್ ಜರ್ಮನಿ ವಿರುದ್ಧ ಸೋತಿತ್ತು. ಇನ್ನು ಸೆನೆಗಲ್ ತಂಡ ಎರಡನೆ ಬಾರಿಗೆ ವಿಶ್ವಕಪ್ನಲ್ಲಿ ಪ್ರಿಕ್ವಾರ್ಟರ್ ಪ್ರವೇಶಿಸಿದೆ.