ಘಾನಾ ವಿರುದ್ಧ ಗೆದ್ದರೂ ಉರುಗ್ವೆ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್‍ನಿಂದ ಹೊರ ಬಿದ್ದು ಆಘಾತ ಅನುಭವಿಸಿತು. ಅಲ್ ವಕ್ರಾದಲ್ಲಿ ನಡೆದ ಪಂದ್ಯದಲ್ಲಿ ಘಾನಾ ತಂಡ ಉರುಗ್ವೆ ವಿರುದ್ಧ 2-0 ಗೋಲುಗಳಿಂದ ಗೆದ್ದುಕೊಂಡಿತು. ಆದರೆ ಅದೃಷ್ಟ ಜೊತೆಗಿರಲಿಲ್ಲ.
ಮೊದಲ ಅವಯಲ್ಲಿ ಉರುಗ್ವೆ ಎರಡು ಗೋಲು ಬಾರಿಸಿತು. 26ನೇ ಹಾಗೂ 32ನೇ ನಿಮಿಷದಲ್ಲಿ ಅರ್ರಾಸ್ಕಾಟಾ ಗೋಲು ಹೊಡೆದರು.
ಕಳೆದ ಮೂರು ವಿಶ್ವಕಪ್‍ಗಳಿಂದಲೂ ನಾಕೌಟ್ ಪ್ರವೇಶಿಸಿದ್ದ ಘಾನಾ ತಂಡ ಈ ಬಾರಿ ಗುಂಪು ಹಂತದಲ್ಲೆ ನಿರ್ಗಮಿಸಿತು. ಮೊದಲ ಎರಡೂ ಪಂದ್ಯಗಳಲ್ಲಿ ಗೋಲು ಹೊಡೆಯದಿದ್ದು ತಂಡ ಹೊರಬೀಳಲು ಕಾರಣವಾಯಿತು.
ಮೊದಲ ಪಂದ್ಯದಲ್ಲಿ ದ.ಕೊರಿಯಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿತ್ತು. ನಂತರ ಪೋರ್ಚುಗಲ್ ವಿರುದ್ಧ 0-2 ಗೋಲುಗಳಿಂದ ಶರಣಾಗಿತ್ತು. ನಿರ್ಣಾಯಕ ಮೂರನೆ ಪಂದ್ಯದಲ್ಲಿ ಘಾನಾವನ್ನು ಸೋಲಿಸಿ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ಪೋರ್ಚುಗಲ್ ವಿರುದ್ಧ ಸೋಲಬೇಕಿತ್ತು ಅಥವಾ ಡ್ರಾ ಮಾಡಿಕೊಂಡಿದ್ದರೆ ನಾಕೌಟ್‍ಗೇರುತ್ತಿತ್ತು.
ಇದ್ಯಾವ ಲೆಕ್ಕಾಚಾರಗಳು ನಡೆಯಲಿಲ್ಲ. ಪೋರ್ಚುಗಲ್ ವಿರುದ್ಧ ಹೆಚ್ಚುವರಿ ನಿಮಿಷದಲ್ಲಿ ಗೋಲು ಹೊಡೆದ ಕೊರಿಯಾ ಉರುಗ್ವೆಗೆ ಶಾಕ್ ನೀಡಿತು. ಪಂದ್ಯ ನೋಡಿದ ಉರುಗ್ವೆ ತಂಡದ ನಾಯಕ ಸುವಾರೆಚ್ ಮತ್ತು ತಂಡದ ಆಟಗಾರರು ಕಣ್ಣೀರಿಟ್ಟರು.