ಹೆಚ್ಚುವರಿ ನಿಮಿಷದಲ್ಲಿ ಹವಾಂಗ್ ಹೀ ಚಾನ್ ಹೊಡೆದ ಗೋಲಿನೆ ನೆರವಿನಿಂದ ದಕ್ಷಿಣ ಕೊರಿಯಾ ನಾಕೌಟ್ ಪ್ರವೇಶಿಸಿತು. 2010ರ ಬಳಿಕ ಮೊದಲ ಬಾರಿಗೆ ಕೊರಿಯಾ ನಾಕೌಟ್ಗೇರಿದೆ.
ಅಲ್ ರಯ್ಯನ್ನಲ್ಲಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಕೊನೆಯ ನಿಮಿಷಗಳಲ್ಲಿ ಅಚ್ಚರಿಯ ಗೋಲು ಹೊಡೆದ 2-1 ಗೋಲುಗಳಿಂದ ದ.ಕೊರಿಯಾ ಎಚ್ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದು ಪ್ರಿಕ್ವಾರ್ಟರ್ಗೆ ಲಗ್ಗೆ ಹಾಕಿತು.
ಪಂದ್ಯದ 5ನೇ ನಿಮಿಷದಲೇ ಪೋರ್ಚುಗಲ್ ತಂಡದ ರಿಕಾಡೊ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ನಂತರ ಚೆಂಡಿನ ಮೇಲೆ ನಿಯಂತ್ರಣ ಸಾಸಿದ ದ.ಕೊರಿಯಾ 27ನೇ ನಿಮಿಷದಲ್ಲಿ ಕಿಮ್ ಯಂಗ್ ಜಿವಾನ್ ಗೋಲು ಹೊಡೆದು ಸಮಗೊಳಿಸಿದರು. ಮೊದಲ ಅವ ಸಮಬಲದಲ್ಲಿ ಮುಗಿಯಿತು.
ಎರಡನೆ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಹೆಚ್ಚುವರಿ ನಿಮಿಷದಲ್ಲಿ ಹವಾಂಗ್ ಹೀ ಚಾನ್ ಗೋಲು ಹೊಡೆದರು.
ಗೋಲು ಹೊಡೆಯುವದರಲ್ಲಿ ಉರುಗ್ವೆ ಜೊತೆ ಪೈಪೋಟಿ ನೀಡಿದ್ದ ದಕ್ಷಿಣ ಕೊರಿಯಾ ಹೆಚ್ಚು ಗೋಲು ಹೊಡೆದು ಮುಂದಿನ ಹಂತಕ್ಕೆ ಹೋಗುವಲ್ಲಿ ಯಶಸ್ವಿಯಾಯಿತು. ದ.ಕೊರಿಯಾ 3 ಪಂದ್ಯಗಳಲ್ಲಿ ನಾಲ್ಕು ಗೋಲು ಹೊಡೆದರೆ ಉರುಗ್ವೆ ಕೇವಲ 2 ಗೋಲುಗಳನ್ನು ಹೊಡೆದಿದೆ.