FIFA ವಿಶ್ವಕಪ್ 2022 ರಲ್ಲಿ ಸ್ಪೇನ್ ವಿರುದ್ಧದ ಪಂದ್ಯವನ್ನು ಡ್ರಾ ಸಾಧಿಸಿದ, ಜರ್ಮನಿ 16 ರ ಘಟ್ಟ ಪ್ರವೇಶಿಸುವ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯದ ಒಂದು ಹಂತದಲ್ಲಿ ಜರ್ಮನಿ 0-1 ಗೋಲುಗಳಿಂದ ಹಿನ್ನಡೆಯಲ್ಲಿತ್ತು, ಆದರೆ ಕೊನೆಯ ಕೆಲವು ನಿಮಿಷಗಳಲ್ಲಿ ನಿಕ್ಲಾಸ್ ಫುಲ್ಕ್ರುಗ್ ಅವರ ಗೋಲು ಜರ್ಮನಿಯನ್ನು ಪಂದ್ಯದ ಜೊತೆಗೆ ಪಂದ್ಯಾವಳಿಗೆ ಮರಳಿ ತಂದಿದೆ.
ಮೊದಲಾವಧಿಯ ಆಟದಲ್ಲಿ ಎರಡೂ ತಂಡಗಳು ಗೋಲು ಬಾರಿಸಲು ಶತಪ್ರಯತ್ನ ಮಾಡಿದವು. ಆದರೆ ಆಗಲಿಲ್ಲ. ಈ ಅವಧಿಯಲ್ಲಿ ಎರಡೂ ತಂಡಗಳ ಆಟ ನೆರದವರಿಗೆ ಮನೋರಂಜನೆ ನೀಡಿತು. ಎರಡನೇ ಅವಧಿಯ 62ನೇ ನಿಮಿಷದಲ್ಲಿ ಸ್ಪೇನ್ ಸೊಗಸಾದ ಗೋಲು ಬಾರಿಸಿ ತನ್ನ ಅಂತರವನ್ನು ಹಿಗ್ಗಿಸಿಕೊಂಡಿತು. ಅಲ್ಲದೆ ಜರ್ಮನಿಗೆ ಗೋಲು ಬಾರಿಸಲು ಅವಕಾಶವನ್ನು ನೀಡಲಿಲ್ಲ. ಆದರೆ ಸ್ಪೇನ್ ತಂಡದ ರಕ್ಷಣಾ ವಿಭಾಗಕ್ಕೆ ಮಣ್ಣು ಹಾಕಿದ ಜರ್ಮನಿ ಆಟಗಾರರು ಇದೇ ಅವಧಿಯಲ್ಲಿ ಗೋಲು ಬಾರಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಜರ್ಮನಿ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 1-2 ಅಂತರದಿಂದ ಸೋತಿತ್ತು. ಒಂದು ವೇಳೆ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದರೆ, ಜರ್ಮನಿಯ ಮುಂದಿನ ದಾರಿ ಬಹುತೇಕ ಮುಚ್ಚಬಹುದಿತ್ತು. ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಸ್ಪೇನ್ 7-0 ಗೋಲುಗಳಿಂದ ಕೋಸ್ಟರಿಕಾವನ್ನು ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಈ ತಂಡದ ವಿರುದ್ಧದ ಪಂದ್ಯವನ್ನು ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ.
FIFA, Spain, Football, World Cup, Germany,