ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಹರಾಜಿ ಭರದ ಸಿದ್ಧತೆ ನಡೆದಿವೆ. ಈಗಾಗಲೇ ಫ್ರಾಂಚೈಸಿಗಳ ಸ್ಟಾರ್ ಆಟಗಾರರ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ಸಾಲಿಗೆ ಈಗ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಕ್ಯಾಮರೂನ್ ಗ್ರೀನ್ ಸೇರೆಕೊಂಡಿದ್ದಾರೆ.
ಗ್ರೀನ್ ಸೋಮವಾರ ಐಪಿಎಲ್ ಆಡುವುದಾಗಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಮುಂದಿನ ಸೀಸನ್‌ಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಅನೇಕ ಫ್ರಾಂಚೈಸಿಗಳು ಈ ಸ್ಫೋಟಕ ಬ್ಯಾಟ್ಸ್‌ಮನ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಣದ ಹೊಳೆಯನ್ನು ಹರಿಸಲಿದ್ದಾರೆ.
“ನಾನು ಐಪಿಎಲ್‌ಗೆ ನೋಂದಾಯಿಸಿಕೊಂಡಿದ್ದೇನೆ. ಇದು ಒಂದು ರೋಮಾಂಚಕಾರಿ ಅವಕಾಶವಾಗಿದೆ. ಬಹಳಷ್ಟು ಜನರೊಂದಿಗೆ ಮಾತನಾಡುವುದು ಹಾಗೂ ಆಡುವುದು ಅನುಭವ ದೊಡ್ಡದು” ಎಂದು ಗ್ರೀನ್ ಹೇಳಿದ್ದಾರೆ.

“ಇದು ನನಗೆ ಹೆಚ್ಚು ಪರಿಚಯವಿಲ್ಲದ ವೇದಿಕೆಯಾಗಿದೆ. ನಾನು ಎಷ್ಟು ಸಾಧ್ಯವೋ ಅಷ್ಟು ಕಲಿಯಲು ನಾನು ಮುಕ್ತನಾಗಿದ್ದೇನೆ ಮತ್ತು ಇದು ಬಹುಶಃ ಕಲಿಯಲು ಉತ್ತಮ ವೇದಿಕೆಯಾಗಿದೆ” ಎಂದಿದ್ದಾರೆ.
ಭಾರತ ಪ್ರವಾಸದಲ್ಲಿ ವಾರ್ನರ್ ಅನುಪಸ್ಥಿತಿಯಲ್ಲಿ ಗ್ರೀನ್ ಆರೋನ್ ಫಿಂಚ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದರು. ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸಾಕಷ್ಟು ಪ್ರಭಾವ ಬೀರಿದ್ದರು. ಅಂದಿನಿಂದ, ಇವರ ಮೇಲೆ ಫ್ರಾಂಚೈಸಿಗಳು ಕಣ್ಣು ನೆಟ್ಟಿದ್ದರು.
ಭಾರತ ಪ್ರವಾಸದಲ್ಲಿ 3 ಪಂದ್ಯಗಳ T20I ಸರಣಿಯಲ್ಲಿ ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಪರ ಗರಿಷ್ಠ ರನ್ ಗಳಿಸಿದ ಆಟಗಾರ. ಇವರು 3 ಪಂದ್ಯಗಳಲ್ಲಿ 39.33 ಸರಾಸರಿ ಮತ್ತು 214.55 ಸ್ಟ್ರೈಕ್ ರೇಟ್‌ನಲ್ಲಿ 118 ರನ್ ಸಿಡಿಸಿದ್ದಾರೆ.