ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಇಂದು ಪೋರ್ಚುಗಲ್ ತಂಡ ದ.ಕೊರಿಯಾ ವಿರುದ್ಧ ಆಡಲಿದೆ. ಪೋರ್ಚುಗಲ್ ತಂಡ ಈಗಾಗಲೇ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.
ಒಂದು ಅಂಕವನ್ನು ಸಂಪಾದಿಸಿರುವ ದಕ್ಷಿಣ ಕೊರಿಯಾ ಗೆಲುವಿನೊಂದಿಗೆ ವಿದಾಯ ಹೇಳಬೇಕಿದೆ. ಪೋರ್ಚುಗಲ್ ತಂಡ ಈ ಪಂದ್ಯದಲ್ಲಿ ಸೋಲನ್ನು ತಡೆಯಬೇಕಿದೆ.
ನಾಕೌಟ್ ಕನಸಲ್ಲಿ ಘಾನಾ
ಘಾನಾ ತಂಡ ನಾಟಕೀಯವಾಗಿ ದ.ಕೊರಿಯಾ ವಿರುದ್ಧ ಗೆದ್ದು ನಾಕೌಟ್ಗೆ ಹೋಗುವ ಪ್ರಯತ್ನದಲ್ಲಿದೆ. ಇಂದಿನ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ನಾಕೌಟ್ ಹಂತವನ್ನು ಖಚಿತಪಡಿಸಿಕೊಳ್ಳಲಿದೆ.
ಬ್ರೆಜಿಲ್ಗೆ ಕ್ಯಾಮರೂನ್ ಸವಾಲು
ಕ್ಯಾಮರೂನ್ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಕ್ಯಾಮರೂನ್ ನಾಕೌಟ್ಗೆ ಅರ್ಹತೆ ಪಡೆಯಲಿದೆ. ಕ್ಯಾಮರೂನ್ ತಂಡ ಗೆಲ್ಲುವುದು ಮಾತ್ರವಲ್ಲ ಸ್ವಟ್ಜರ್ಲೆಂಡ್ ಗೆಲ್ಲಬೇಕು. ಕ್ಯಾಮರೂನ್ ವಿಷ್ಯ ಬ್ರೆಜಿಲ್ ಕೈಯಲ್ಲಿದೆ.
ಸ್ವಿಟ್ಜರ್ಲೆಂಡ್ ತಂಡ ಸರ್ಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಸ್ವಿಟ್ಜರ್ಲೆಂಡ್ ನಾಕೌಟ್ ಹಂತವನ್ನು ಪ್ರವೇಶಿಲಿಸದೆ. ಡ್ರಾಆದಲ್ಲಿ ಕ್ಯಾಮರೂನ್ ತಂಡ ಬ್ರೇಜಿಲ್ ವಿರುದ್ಧ ಸೋಲಬೇಕಿದೆ.