ಫಾರ್ವರ್ಡ್ ಆಟಗಾರ ಮ್ಯಾಥೀವ್ ಲೆಕ್ಕಿ ಹೊಡೆದ ಏಕೈಕ ಗೋಲಿನ ನೆರೆವಿನಿಂದ ಆಸ್ಟ್ರೇಲಿಯಾ ಫಿಫಾ ವಿಶ್ವಕಪ್ನಲ್ಲಿ ನಾಕೌಟ್ ಹಂತ ಪ್ರವೇಶಿಸಿದೆ.
ಅಲ್ ವಾಖರದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಡೆನ್ಮಾರ್ಕ್ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಇದರೊಂದಿಗೆ 16 ವರ್ಷಗಳ ಬಳಿಕ ಆಸಿಸ್ ನಾಕೌಟ್ ಹಂತ ಪ್ರವೇಶಿಸಿದೆ.
ಮೊದಲ ಅವಯಲ್ಲಿ ಬಲಿಷ್ಠವಾಗಿ ಕಂಡ ಡೆನ್ಮಾರ್ಕ್ಗೆ ಗೋಲು ಹೊಡೆಯಲು ಅವಕಾಶವಿತ್ತು. ಲಿಂಡ್ಸ್ಟೋರ್ಮ್ ಹೊಡೆದ ಚೆಂಡನ್ನು ಆಸಿಸ್ಗೋಲ್ ಕೀಪರ್ ಮಥೈಸ್ ಜೆನ್ಸನ್ ತಡೆದರು.ಹೀಗಾಗಿ ಯಾವುದೇ ಗೋಲು ದಾಖಲಾಗಲಿಲ್ಲ.
ಎರಡನೆ ಅವಯಲ್ಲಿ ಆಸಿಸ್ ಅವಕಾಶಗಳನ್ನು ಸೃಷ್ಟಿಸಿತು. ಇದರ ಫಲವಾಗಿ 60ನೇ ನಿಮಿಷದಲ್ಲಿ ಮ್ಯಾಥೀವ್ ಲೆಕ್ಕಿ ಗೋಲು ಹೊಡೆದರು.
ಇದು ವಿಶ್ವಕಪ್ನಲ್ಲಿ ಅವರ ಮೊದಲ ಗೋಲಾಗಿದೆ. ಡೆನ್ಮಾರ್ಕ್ 13 ಶಾಟ್ಗಳನ್ನು ಹೊಡೆದರೂ ಪ್ರಯೋಜನವಾಗಲಿಲ್ಲ. ಆಸ್ಟ್ರೇಲಿಯಾ 6 ಅಂಕಗಳೊಂದಿಗೆ ಎರಡನೆ ಸ್ಥಾನ ಪಡೆಯಿತು.