ಐದು ಬಾರಿ ಚಾಂಪಿಯನ್ ಬ್ರೆಜಿಲ್‍ಗೆ ಕ್ಯಾಮರೂನ್ ತಂಡ ಸೋಲಿನ ಆಘಾತ ನೀಡಿದೆ. ವಿಶ್ವಕಪ್‍ನಲ್ಲಿ ಬ್ರೆಜಿಲ್ ತಂಡವನ್ನು ಸೋಲಿಸಿದ ಮೊದಲ ಆಫ್ರಿಕಾ ತಂಡ ಎಂಬ ದಾಖಲೆ ಬರೆಯಿತು.
ಲೂಸೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕ್ಯಾಮರೂನ್ 1-0 ಗೋಲಿನಿಂದ ಗೆದ್ದು ಬೀಗಿತು. ಬ್ರೆಜಿಲ್ ತಂಡದಲ್ಲಿ 9 ಬದಲಾವಣೆಗಳನ್ನು ಮಾಡಲಾಗಿತ್ತು. ಎರಡನೆ ದರ್ಜೆ ತಂಡವಾಗಿದ್ದ ಬ್ರೇಜಿಲ್ 21 ಬಾರಿ ಗೋಲು ಹೊಡೆಯಲು ಪ್ರಯತ್ನಪಟ್ಟರೂ ಆಗಲಿಲ್ಲ.
ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ನಿಗದಿತ ಅವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ. ಆದರೆ ಹೆಚ್ಚುವರಿ 92ನೇ ನಿಮಿಷದಲ್ಲಿ ಕ್ಯಾಮರೂನ್ ತಂಡದ ಅಬುಬಾಕರ್ ಗೋಲು ಹೊಡೆದು ತಂಡಕ್ಕೆ ರೋಚಕ ಜಯ ತಂದಕೊಟ್ಟರು. ಬ್ರೆಜಿಲ್ ಆಘಾತ ಅನುಭವಿಸಿತು.
ಬ್ರೆಜಿಲ್ ತಂಡ ಈಗಾಗಲೇ ನಾಕೌಟ್ ಹಂತ ಪ್ರವೇಶಿಸಿರುವುದರಿಂದ ಯಾವುದೇ ಹಾನಿಯಾಗಲಿಲ್ಲ. ಕ್ಯಾಮರೂನ್ ತಂಡ 4 ಅಂಕಗಳೊಂದಿಗೆ ಟೂರ್ನಿಗೆ ಗೆಲುವಿನೊಂದಿಗೆ ವಿದಾಯ ಹೇಳಿತು. ಬ್ರೆಜಿಲ್ ತಂಡ ನಾಕೌಟ್‍ನಲ್ಲಿ ದ.ಕೊರಿಯಾವನ್ನು ಎದುರಿಸಲಿದೆ.