ಫಿಫಾ ವಿಶ್ವಕಪ್ನ ಎ ಗುಂಪಿನ ಪಂದ್ಯದಲ್ಲಿ ಈಕ್ವೆಡಾರ್ ಹಾಗೂ ನೆದರ್ಲೆಂಡ್ ನಡುವಿನ ಕದನ ಡ್ರಾನಲ್ಲಿ ಅಂತ್ಯ ಕಂಡಿದೆ.
ದೋಹಾದ ಖಲೀಫಾ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ನೆದರ್ಲೆರಂಡ್ ಹಾಗೂ ಈಕ್ವೆಡಾರ್ ತಂಡಗಳು ಡ್ರಾಗೆ ತೃಪ್ತಿಪಟ್ಟವು. ಪಂದ್ಯದ ಆರನೆ ನಿಮಿಷದಲ್ಲಿ ನೆದರ್ಲೆಂಡ್ನ ಕೋಡಿ ಗಾಕ್ಪೊ
ಗೋಲು ಹೊಡೆದರು. ಈ ಗೋಲಿನೊಂದಿಗೆ ನೆದರ್ಲೆಂಡ್ ಮೊದಲ ಅವಯಲ್ಲಿ 1-0 ಮುನ್ನಡೆ ಪಡೆಯಿತು.
ಎಚ್ಚೆತ್ತು ಎರಡನೆ ಅವಯಲ್ಲಿ ಕಣಕ್ಕಿಳಿದ ಈಕ್ವೆಡಾರ್ 49ನೇ ನಿಮಿಷದಲ್ಲಿ ಎನ್ನೆರ್ ವೆಲೆನ್ಸಿಯ ಗೋಲು ಹೊಡೆದು ಸಮಗೊಳಿಸಿದರು.
ಎನ್ನೆರ್ ಈ ವಿಶ್ವಕಪ್ನಲ್ಲಿ ಮೂರನೆ ಗೋಲು ಹೊಡೆದು ಮಿಂಚಿದರು.
ನಂತರ ಉಭಯ ತಂಡಗಳು ಗೋಲು ಹೊಡೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ಈಕ್ವೆಡಾರ್,ನೆದರ್ಲೆಂಡ್ಸ್ ಮುಂದಿನ 16ರ ಹಂತಕ್ಕೆ ಹೋಗುವುದು ಸುಲಭವಾಗಿದೆ. ಎರಡೂ ತಂಡಗಳು ತಲಾ ನಾಲ್ಕು ಅಂಕಗಳನ್ನ ಪಡೆದಿವೆ.
ಆತಿಥೇಯ ಕತಾರ್ ಟೂರ್ನಿಯಿಂದ ಹೊರಕ್ಕೆ
ಫಿಫಾ ವಿಶ್ವಕಪ್ನ ಆತಿಥ್ಯ ವಹಿಸಿರುವ ಕತಾರ್ ಟೂರ್ನಿಯಿಂದ ಹೊರ ಬಿದ್ದಿದೆ. ಸೆನೆಗಲ್ ವಿರುದ್ಧ 1-3 ಗೋಲುಗಳಿಂದ ಸೋತು ಮತ್ತೆ ನಿರಾಸೆ ಅನುಭವಿಸಿತು.
ಕತಾರ್ ತಂಡದ ಭವಿಷ್ಯ ನೆದರ್ಲೆಂಡ್ ಹಾಗೂ ಈಕ್ವಡಾರ್ ಪಂದ್ಯ ಮೇಲೆ ನಿಂತಿತ್ತು. ಕತಾರ್ ಟೂರ್ನಿಯಲ್ಲಿ ಉಳಿಯಬೇಕಿದ್ದಲ್ಲಿ ನೆದರ್ಲೆಂಡ್ ಸೋಲಬೇಕಿತ್ತು. ಆದರೆ ನೆದರ್ಲೆಂಡ್-ಈಕ್ವೆಡಾರ್ ಪಂದ್ಯ ಡ್ರಾ ಆಗಿದ್ದರಿಂದ ಕತಾರ್ ಟೂರ್ನಿಯಿಂದ ಹೊರ ಬೀಳಬೇಕಾಯಿತು. ನೆದರ್ಲೆಂಡ್ ವಿರುದ್ಧ ಕತಾರ್ ಕೊನೆಯ ಪಂದ್ಯವನ್ನು ಅಡಲಿದೆ.