ಫಿಫಾ ವಿಶ್ವಕಪ್‍ನ ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಯುಎಸ್‍ಎ ನಡುವಿನ ಕದನ ಗೋಲಿಲ್ಲದೇ ಡ್ರಾನಲ್ಲಿ ಅಂತ್ಯ ಕಂಡಿದೆ.
ಶನಿವಾರ ಅಲ್‍ಬೇತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎರಡೂ ಸಮಬಲದ ಹೋರಾಟ ನೀಡಿದವು. ಆದರೆ ಗೋಲು ಹೊಡೆಯುವಲ್ಲಿ ವಿಫಲವಾದವು.
ವಿಶ್ವಕಪ್‍ನಲ್ಲಿ ಐದನೆ ಬಾರಿಗೆ ಗೋಲಿಲ್ಲದೇ ಇಂಗ್ಲೆಂಡ್ ಮತ್ತು ಯುಎಸ್‍ಎ ಡ್ರಾ ಮಾಡಿಕೊಂಡಿವೆ.
ಎರಡು ಬಾರಿ ಕೌಂಟರ್ ಅಟ್ಯಾಕ್ ಮಾಡಿದ ಯುಎಸ್‍ಎಗೆ ಗೋಲು ಹೊಡೆಯುವ ಅವಕಾಶವಿತ್ತು. ಆದರೆ ಅವಕಾಸಗಳನ್ನು ಕೈಚೆಲ್ಲಿದರು.
ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು. ಈ ಪಂದ್ಯ ಡ್ರಾ ಆಗಿದ್ದರೂ ಇಂಗ್ಲೆಂಡ್ 16ರ ಹಂತಕ್ಕೆ ಹೋಗುವುದು ಖಚಿತವಾಗುತ್ತದೆ.
ಇಂಗ್ಲೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡರೆ ಯುಎಸ್‍ಎ ಮೂರನೆ ಸ್ಥಾನದಲ್ಲಿದೆ.