ಮೊದಲ ಅವಧಿಯಲ್ಲಿ ಎರಡು ಗೊಲುಗಳನ್ನು ಹೊಡೆದ ಮೆಕ್ಸಿಕೊ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳಿಂದ ಗೆದ್ದುಕೊಂಡಿತು. ಆದರೆ ಗೋಲುಗಳ ವ್ಯತ್ಯಾಸದಿಂದಾಗಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಉತ್ಸಾಹದಿಂದಲೇ ಕಣಕ್ಕಳಿದ ಮೆಕ್ಸಿಕೊ ಆರಂಭದಲ್ಲೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು. 47ನೇ ನಿಮಿಷದಲ್ಲಿ ಹೆನ್ರಿ ಮಾರ್ಟಿನ್ ಗೋಲು ಹೊಡೆದರು.
ಇದಾದ ಐದು ನಿಮಿಷದಲ್ಲಿ ಲೂಹಿಸ್ ಚಾವೆಜ್ (51) ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆ ನೀಡಿದರು. ಪಂದ್ಯ ಕೊನೆಯವರೆಗೂ ಮೆಕ್ಸಿಕೊ ಗೋಲು ಹೊಡೆಯದಂತೆ ನೋಡಿಕೊಂಡಿತು.
ಹೆಚ್ಚುವರಿ ನಿಮಿಷ ಕೊಟ್ಟಾಗ ಸೌದಿ ಅರೇಬಿಯಾ ತಂಡದ ಸಾಲೇಮ್ ಅಲ್ ಡಾವ್ಸಾರಿ (90 +5) ಗೋಲು ಹೊಡೆದು ಮೆಕ್ಸಿಕೊಗೆ ಆಘಾತ ನೀಡಿದರು. ಕೊನೆಯ ಗೋಲು ಮೆಕ್ಸಿಕೊ ತಂಡಕ್ಕೆ ಮುಳುವಾಯಿತು.