ವಿಶ್ವದ 2ನೇ ಶ್ರೇಯಾಂಕಿತ ತಂಡ ಬೆಲ್ಜಿಯಂ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದು ಆಘಾತ ಅನುಭವಿಸಿ ಮನೆಗೆ ಹೋಗಿದೆ. 1998ರ ನಂತರ ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರ ನಡೆದಿದೆ.
ಗುರುವಾರ ತಡರಾತ್ರಿ ಅಲ್ ರಯ್ಯಾನ್ನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕ್ರೋವೇಷಿಯಾ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟು ಭಾರೀ ನಿರಾಸೆ ಅನುಭವಿಸಿತು.
ಬೆಲ್ಜಿಯಂ ತಂಡದ ಅನುಭವಿ ಆಟಗಾರ ರೊಮೆಲು ಲುಕಾಕು ಮೂರು ಸುಲಭವಾಗಿ ಗೋಲು ಹೊಡೆಯಲು ಅವಕಾಶವಿದ್ದರೂ ಗೋಲು ಹೊಡೆಯಲಿಲ್ಲ. ಇದು ಬೆಲ್ಜಿಯಂಗೆ ದುಬಾರಿಯಾಯಿತು.
ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಕ್ರೋವೇಷಿಯಾ 5 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ನಾಕೌಟ್ಗೆ ಪ್ರವೇಶ ಪಡೆಯಿತು.
ಕ್ರೋವೇಷಿಯಾ ತಂಡ ಇ ಗುಂಪಿನಲ್ಲಿ ಗೆಲ್ಲುವ ತಂಡ ಜೊತೆ ಸೆಣಸಲಿದೆ. ಸ್ಪೇನ್, ಕೋಸ್ಟರಿಕಾ ಅಥವಾ ಜಪಾನ್ ತಂಡವನ್ನು ಎದುರಿಸಲಿದೆ.