ನಾಯಕ ಕಾಲಿಡೌ ಕೌಲಿಬಾಲಿ ಅವರ ಮಿಂಚಿನ ಗೋಲಿನ ನೆರವಿನಿಂದ ಸೆನೆಗಲ್ ತಂಡ ಈಕ್ವೆಡಾರ್ ವಿರುದ್ಧ 2-1 ಗೋಲುಗಳಿಂದ ಗೆಲುವು ದಾಖಲಿಸಿ ಎರಡನೆ ಬಾರಿಗೆ ನಾಕೌಟ್ ಪ್ರವೇಶಿಸಿದೆ.
44ನೇ ನಿಮಿಷದಲ್ಲಿ ಪನಾಲ್ಟಿ ಅವಕಾಶ ಪಡೆದ ಸೆನೆಗಲ್ ತಂಡ ಇಸ್ಮಾಲಿಯಾ ಅವರ ನೆರವಿನಿಂದ ಗೋಲು ದಾಖಲಿಸಿತು.
ನಂತರ 67ನೇ ನಿಮಿಷದಲ್ಲಿ ಈಕ್ವೆಡಾರ್ ಮೋಹಿಸಿಸ್ ಕಾಸಿಡಿಯೊ 67ನೇ ನಿಮಿಷದಲ್ಲಿ ಗೋಲು ಹೊಡೆದು ಸಮಗೊಳಿಸಿದರು. ನಂತರ ದಾಳಿಗಿಳಿದ ಸೆನೆಗಲ್ ಈಕ್ವೆಡಾರ್ ಭದ್ರಕೋಟೆಯನ್ನು ಭೇದಿಸಿತು. ನಾಯಕ ಕಾಲಿಡೌ ಕೌಲಿಬಾಲಿ ಗೋಲು ಹೊಡೆದು ಸಂಭ್ರಮಿಸಿದರು.
ನೆದರ್‍ಲೆಂಡ್‍ಗೆ ಸುಲಭ ತುತ್ತಾದ ಕತಾರ್
ನೆದರ್‍ಲೆಂಡ್ ತಂಡ ಆತಿಥೇಯ ಕತಾರ್ ವಿರುದ್ಧ 2-0 ಗೋಲುಗಳಿಂದ ಗೆದ್ದು ಪ್ರಿಕ್ವಾರ್ಟರ್ ಪ್ರವೇಶಿಸಿದೆ. ಆತಿಥೇಯ ಕತಾರ್ ಒಂದೂ ಪಂದ್ಯವನ್ನೂ ಗೆಲ್ಲದೇ ಟೂರ್ನಿಗೆ ವಿದಾಯ ಹೇಳಿದೆ.
26ನೇ ನಿಮಿಷದಲ್ಲಿ ನೆದರ್‍ಲೆಂಡ್‍ನ ಗಾಕ್ಪೊ ಗೋಲು ಹೊಡೆದರು. 49ನೇ ನಿಮಿಷದಲ್ಲಿ ಡೆ ಜಾಂಗ್ ಗೋಲು ಹೊಡೆದು ಮುನ್ನಡೆ ನೀಡಿದರು.