ಬಲಿಷ್ಠ ಬೆಲ್ಜಿಯಂ ತಂಡ ಮಹತ್ವದ ಪಂದ್ಯದಲ್ಲಿ ಕ್ರೋವೇಷಿಯಾ ತಂಡವನ್ನು ಎದುರಿಸಲಿದೆ. ಮೊನ್ನೆ ಮೊರೊಕ್ಕೊ ವಿರುದ್ಧ ಸೋತು ಆಘಾತ ಅನುಭವಿಸಿದ್ದ ವಿಶ್ವದ ಎರಡನೆ ಶ್ರೇಯಾಂಕಿತ ತಂಡ ಕ್ರೋವೇಷಿಯಾ ವಿರುದ್ಧ ಗೆಲ್ಲಲೇಬೇಕಿದೆ. ಕ್ರೋವೇಷಿಯಾ ಕೆನಡಾ ವಿರುದ್ಧ ಗೆದ್ದು ಬೀಗಿತ್ತು.
ಮೊರೊಕ್ಕೊ ಎದುರಾಳಿ ಕೆನಡಾ
ಬೆಲ್ಜಿಯಂ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದ್ದ ಮೊರೊಕ್ಕೊ ಇಂದು ದುರ್ಬಲ ಕೆನಡಾ ತಂಡವನ್ನು ಎದುರಿಸಲಿದೆ. ಟೂರ್ನಿಯಿಂದ ಹೊರ ಬಿದ್ದಿರುವ ಕೆನಡಾ ವಿರುದ್ಧ ಡ್ರಾ ಮಾಡಿಕೊಂಡರೂ ಮೊರೊಕ್ಕೊ ನಾಕೌಟ್ ತಲುಪಲಿದೆ.
ಸ್ಪೇನ್, ಜಪಾನ್ ಕಾದಾಟ
ಇ ಗುಂಪಿನಲ್ಲಿ ಇಂದು ಜಪಾನ್ ಹಾಗೂ ಸ್ಪೇನ್ ತಂಡಗಳು ಸೆಣಸಲಿವೆ. ಜಪಾನ್ ತಂಡ ಜರ್ಮನಿಯನ್ನು ಸೋಲಿಸಿ ಆಘಾತ ನೀಡಿತ್ತು. ಜಪಾನ್ ಈ ಪಂದ್ಯ ಸೋತರೆ ಜರ್ಮನಿ ಮತ್ತು ಕೋಸ್ಟರಿಕಾ ಫಲಿತಾಂಶಕ್ಕಾಗಿ ಕಾಯಬೇಕು. ಸ್ಪೇನ್ ಈ ಪಂದ್ಯ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.

ಕೋಸ್ಟರಿಕಾ ವಿರುದ್ಧ ಗೆಲ್ಲಲೇಬೇಕು ಜರ್ಮನಿ
ಎಲಿಮಿನೇಷನ್ ಭೀತಿ ಎದುರಿಸುತ್ತಿರುವ ಜರ್ಮನಿ ತಂಡ ಇಂದು ಕೋಸ್ಟರಿಕಾ ತಂಡವನ್ನು ಎದುರಿಸಲಿದೆ. ಸ್ಪೇನ್ ವಿರುದ್ಧ ಡ್ರಾ ಮಾಡಿಕೊಂಡಿದ್ದ ಜರ್ಮನಿ ನಾಕೌಟ್ ಗೆ ಹೋಗಬೇಕಿದ್ದಲ್ಲಿ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ.