ಇರಾನ್ ತಂಡ ವೇಲ್ಸ್ ವಿರುದ್ಧ 2-0 ಗೋಲುಗಳಿಂದ ಗೆದ್ದು ಮೊದಲ ಗೆಲುವು ದಾಖಲಿಸಿದೆ. ಇರಾನ್ ಮತ್ತು ವೇಲ್ಸ್ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು.
ಎರಡೂ ಅವಗಳಲ್ಲೂ ಗೋಲುಗಳು ದಾಖಲಾಗಲಿಲ್ಲ. ಆದರೆ ಹೆಚ್ಚುವರಿ ನಿಮಿಷದಲ್ಲಿ ಒಂದಲ್ಲಿ ಎರಡು ಗೋಲುಗಳನ್ನು ಹೊಡೆದು ಗೆಲುವು ಪಡೆಯಿತು.
ಇರಾನ್ ಪರ ಆರ್.ಚೆಶ್ಮಿ (90+8), ರೆಜಾಯಿಯಾನ್ (90 +11) ನಿಮಿಷಗಳಲ್ಲಿ ಗೋಲು ಹೊಡೆದರು.
ಡ್ರಾಗೆ ತೃಪ್ತಿಪಟ್ಟ ಉರುಗ್ವೆ ,ದ.ಕೊರಿಯಾ
ಎಚ್ ಗುಂಪಿನಲ್ಲಿ ಉರುಗ್ವೆ ಮತ್ತು ದ.ಕೊರಿಯಾ ನಡುವಿನ ಪಂದ್ಯದಲ್ಲಿ ಯಾವುದೇ ಗೋಲುಗಳು ದಾಖಲಾಗದೇ ಡ್ರಾನಲ್ಲಿ ಅಂತ್ಯ ಕಂಡಿದೆ.
ಉರುಗ್ವೆ ತಂಡ ಲೂಹಿಸ್ ಸುರೆಜ್ ಮತ್ತು ಡಾರ್ವಿನ್ ನುನೆಜ್ ಬಳಸಿ ಗೋಲು ಹೊಡೆಯುವಲ್ಲಿ ವಿಫಲವಾಯಿತು.
ಮೊದಲ¯ ಅವಧಿಯ 34ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆಯ್ತಿತಾದರೂ ಯಶಸ್ವಿಯಾಗಲಿಲ್ಲ.