ಫುಟ್ಬಾಲ್ನ ವಿಶ್ವಕಪ್ 2022 ಪ್ರಾರಂಭವಾಗಿದೆ. ಉದ್ಘಾಟನಾ ಸಮಾರಂಭದಿಂದಲೇ ಈ ವರ್ಷದ ಕಾರ್ಯಕ್ರಮದ ವೈಭವ ಸ್ಪಷ್ಟವಾಗಿ ತಿಳಿಯುತ್ತದೆ. ಫಿಫಾ ಪ್ರಕಾರ, ಕತಾರ್ನಲ್ಲಿ ಈ ಮಹಾಕುಂಭವನ್ನು ಆಯೋಜಿಸಲು ಇಲ್ಲಿಯವರೆಗೆ 17.81 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇತಿಹಾಸದಲ್ಲೇ ಅತಿ ದುಬಾರಿ ಫುಟ್ಬಾಲ್ ವಿಶ್ವಕಪ್ ಆಯೋಜಿಸಿದ ಹಿರಿಮೆ ಕತಾರ್ ಗೆ ಸಲ್ಲುತ್ತದೆ.
ಕತಾರ್ ನಲ್ಲಿ ಎಷ್ಟು ಕೋಟಿ ರೂಪಾಯಿಗಳು ಖರ್ಚು ಮಾಡಲಾಗಿದೆಯೋ ಅದು ಅದೇಷ್ಟೋ ಚಿಕ್ಕದೇಶಗಳ ಬಜೆಟ್ ಗೆ ಸಮಾನಾಗಿದೆ. ಈ ಕಪ್ ಗೆ ಕತಾರ್ ಕತಾರ್ ಒಂದಲ್ಲ ಎರಡಲ್ಲ 6 ಹೊಸ ಕ್ರೀಡಾಂಗಣಗಳನ್ನು ನಿರ್ಮಿಸಿದೆ. ಇದಲ್ಲದೆ, ಅನೇಕ ತರಬೇತಿ ಸ್ಥಳ ಸಹ ಸೇರಿವೆ. ಸುಧಾರಿತ ಸಾರಿಗೆ ವ್ಯವಸ್ಥೆ, ಉತ್ತಮ ಹೊಸ ರಸ್ತೆಗಳು, ನವೀನ ಹಬ್ಗಳನ್ನು ನಿರ್ಮಿಸಲು ಖರ್ಚು ಹಣವನ್ನು ವ್ಯಯಮಾಡಲಾಗಿದೆ. ಅಂದಹಾಗೆ ಈ ಟೂರ್ನಿಗೆ ಬರೋಬ್ಬರಿ 17.81 ಲಕ್ಷ ಕೋಟಿ ರೂ. ಖರ್ಚಾಗಿದೆ ಎಂದು ತಿಳಿದು ಬಂದಿದೆ.
ಈ ಮೊದಲೇ ತಿಳಿಸಿದ ಹಾಗೆ ಕತಾರ್ ಫಿಫಾ ವಿಶ್ವಕಪ್ ಗಾಗಿ ಖರ್ಚು ಮಾಡಿದ ಹಣ ಹಲವು ದೇಶಗಳ ಬಜೇಟ್ ಗೆ ಸಮಾನಗಿದೆ. 2021-22 ರ ಹಣಕಾಸು ವರ್ಷಕ್ಕೆ ಬಾಂಗ್ಲಾದೇಶದ ವಾರ್ಷಿಕ ಬಜೆಟ್ 5.50 ಲಕ್ಷ ಕೋಟಿ ರೂ. ಆಗುತ್ತದೆ. ಫುಟ್ಬಾಲ್ ವಿಶ್ವಕಪ್ ಗೆ ಖರ್ಚಾದ ಹಣ ಬಾಂಗ್ಲಾದೇಶದ ಒಟ್ಟು ವಾರ್ಷಿಕ ಬಜೆಟ್ಗಿಂತ ಮೂರು ಪಟ್ಟು ಹೆಚ್ಚಿದೆ. ನೇಪಾಳದ ವಾರ್ಷಿಕ ಬಜೆಟ್ 1.63 ಲಕ್ಷ ಕೋಟಿ ರೂ.ಗಿಂತ ಸುಮಾರು 15 ಪಟ್ಟು ಹೆಚ್ಚಾಗಿದೆ.
ಕೆಲವು ದೇಶಗಳ ವಾರ್ಷಿಕ ಬಜೆಟ್
ಅರ್ಜೆಂಟೀನಾ ——————-4.68 ಲಕ್ಷ ಕೋಟಿ ರೂ.
ಫಿನ್ ಲ್ಯಾಂಡ್ ——————-5.10 ಲಕ್ಷ ಕೋಟಿ ರೂ.
ಮ್ಯಾನ್ಮಾರ್ ——————-1.38 ಲಕ್ಷ ಕೋಟಿ ರೂ.
ಬಾಂಗ್ಲಾದೇಶ ——————-5.50 ಲಕ್ಷ ಕೋಟಿ ರೂ.
ನೇಪಾಳ ——————-1.63 ಲಕ್ಷ ಕೋಟಿ ರೂ.
ಶ್ರೀಲಂಕಾ ——————-2.91 ಲಕ್ಷ ಕೋಟಿ ರೂ.
ನ್ಯೂಜಿಲೆಂಡ್ ——————-3.33 ಲಕ್ಷ ಕೋಟಿ ರೂ.
Fifa, football, world cup, annual budget, Argentina, New Zealand