FIFA : ಇಂದಿನಿಂದ ಭಾರತದಲ್ಲಿ ಫುಟ್ಬಾಲ್ ಹವಾ-17 ವರ್ಷಕ್ಕಿಂತ ಕಿರಿಯರ ಮಹಿಳಾ ಫುಟ್ಬಾಲ್ ವಿಶ್ವಕಪ್
FIFA 17 ವರ್ಷಕ್ಕಿಂತ ಕಿರಿಯರ ಮಹಿಳಾ ಫುಟ್ಬಾಲ್ ಪಂದ್ಯಾವಳಿಯ 7ನೇ ಆವೃತ್ತಿ ಅಕ್ಟೋಬರ್ 11 ಮಂಗಳವಾರ ಭುವನೇಶ್ವರದಲ್ಲಿ ಆರಂಭವಾಗಲಿದ್ದು, ಅಕ್ಟೋಬರ್ 30 ರ ವರೆಗೆ ನಡೆಯಲಿದೆ. 16 ರಾಷ್ಟ್ರಗಳು ಪಾಲ್ಗೊಳ್ಳಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಸಕಲ ಸಿದ್ಧವಾಗಿದೆ.
ಮೊದಲ ಪಂದ್ಯ ಆತಿಥೇಯ ಭಾರತ ಹಾಗೂ ಅಮೆರಿಕೆ ತಂಡಗಳ ನಡುವೆ ನಡೆಯಲಿದ್ದು, ಈ ಪಂದ್ಯ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳಿಂಗಾ ಕ್ರೀಡಾಂಗಣ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ನಡೆಯಲಿವೆ.
ಮುಖ್ಯ ಕೋಚ್ ಥಾಮಸ್ ಡೆನ್ಸರ್ಬಿ ಮಾರ್ಗದರ್ಶನದಲ್ಲಿ ಭಾರತ ತಂಡ ಕಠಿಣ ಅಭ್ಯಾಸ ನಡೆಸಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಅನಿತಾ ಕುಮಾರಿ ಹಾಗೂ ನೀತೂ ಲಿಂಡಾ ಉಭಯ ಬದಿಗಳಲ್ಲಿ ಸೆಣಸಾಟ ನಡೆಸಲಿದ್ದು, ಯುವ ಆಟಗಾರ್ತಿ ಶೆಲಿಯಾ ದೇವಿ ಮಿಡ್‌ಫಿಲ್ಡ್ನಲ್ಲಿ ಆಡಲು ಸಜ್ಜಾಗಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದರೆ, ಅಮೆರಿಕೆ ತಂಡ ಖಂಡಿತವಾಗಿಯೂ ಹೆಚ್ಚು ಬಲಿಷ್ಠ ಹಾಗೂ ಹೆಚ್ಚು ಅನುಭವ ಹೊಂದಿದ ತಂಡವಾಗಿದೆ.
17 ವರ್ಷಕ್ಕಿಂತ ಕಿರಿಯರಿಗಾಗಿ ನಡೆದ ಕಾನ್ಕಾಕಾಫ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದ ಅಮೆರಿಕೆ ತಂಡದಲ್ಲಿದ್ದ 21 ಆಟಗಾರ್ತಿಯರ ಪೈಕಿ 15 ಆಟಗಾರ್ತಿಯರು ಸಧ್ಯ ಭಾರತದಲ್ಲಿ ನಡೆಯಲಿರುವ ಫಿಫಾ ಮಹಿಳಾ 17 ವರ್ಷಕ್ಕಿಂತ ಕಿರಿಯರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.
ಭಾರತ ತಂಡ: ಮೊನಾಲಿಶಾ ದೇವಿ ಮೊಯಿರಾಂಗ್ಥೆಮ್, ಮೆಲೊಡಿ ಚಾನು ಕೇಶಾಮ್, ಅಂಜಲಿ ಮುಂಡಾ, ಅಸ್ತಮ್ ಓರಾನ್, ನಕೇತಾ, ಪೂರ್ಣಿಮಾ ಕುಮಾರಿ, ವಾರ್ಷಿಕ, ಶಿಲ್ಕಿ ದೇವಿ ಹೇಮಾಮ್, ಬಬಿನಾ ದೇವಿ ಲಿಶಮ್, ನಿತು ಲಿಂಡಾ, ಶೈಲ್ಜಾ, ಶುಭಾಂಗಿ ಸಿಂಗ್, ಅನಿತಾ ಕುಮಾರಿ, ಲಿಂಡಾ ಕೋಮ್ ದೇವಿ, ನೇಹಾ, ನೇಹಾ ಲೈಶ್ರಾಮ್, ಶೆಲಿಯಾ ದೇವಿ ಲೋಕ್ಟೋಂಗ್ಬಾಮ್, ಕಾಜೋಲ್ ಹಬರ್ಟ್ ಡಿಸೋಜಾ, ಲಾವಣ್ಯ ಉಪಾಧ್ಯಾಯ, ಸುಧಾ ಅಂಕಿತಾ ಟಿರ್ಕೆ.
FIFA , Football, Under-17, Women’s, World Cup