ಫಿಫಾ ವಿಶ್ವಕಪ್‍ನ ಗ್ರೂಪ್ ಹಂತದ ಕೊನೆಯ ಪಂದ್ಯಗಳು ಇಂದು ನಡೆಯಲಿವೆ. ಇಂದು ಬಲಿಷ್ಠ ತಂಡಗಳಾದ ಬೆಲ್ಜಿಯಂ,ಸ್ಪೇನ್, ಜರ್ಮನಿ, ಜಪಾನ್ ತಂಡಗಳು ಸೆಣಸಲಿವೆ.
ಜರ್ಮನಿಗೆ ಸ್ಪೇನ್ ವಿರುದ್ಧ ಅಗ್ನಿ ಪರೀಕ್ಷೆ
ಇ ಗುಂಪಿನಲ್ಲಿ ಬಲಿಷ್ಠ ತಂಡಗಳಾದ ಸ್ಪೇನ್ ಮತ್ತು ಜರ್ಮನಿ ತಂಡಗಳು ಸೆಣಸಲಿವೆ. ಜಪಾನ್ ವಿರುದ್ಧ ಸೋತು ತೀವ್ರ ಮುಖಭಂಗ ಅನುಭವಿಸಿದ್ದ ಜರ್ಮನಿ ಇಂದು ಸ್ಪೇನ್ ವಿರುದ್ಧದ ಕದನ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಸ್ಪೇನ್ ತಂಡ ಕೋಸ್ಟರಿಕಾ ವಿರುದ್ಧ 7-0 ಅಂತರದಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಜಪಾನ್ – ಕೋಸ್ಟರಿಕಾ ಕದನ
ಫಿಫಾ ವಿಶ್ವಕಪ್‍ನ ಇ ಗುಂಪಿನಲ್ಲಿ ಇಂದು ಜಪಾನ್ ತಂಡ ಕೋಸ್ಟಾ ರಿಕಾ ತಂಡವನ್ನು ಎದುರಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಜರ್ಮನಿ ತಂಡವನ್ನು ಸೋಲಿಸಿ ಪುಟ್ಬಾಲ್ ಜಗತ್ತನ್ನೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದ ಜಪಾನ್ ತಂಡ ಇಂದು ಫಿಫಾ 31ನೇ ಶ್ರೇಯಾಂಕಿತ ತಂಡ ಕೋಸ್ಟ ರಿಕಾ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯವನ್ನು ಜಪಾನ್ ಗೆದ್ದರೆ 16ರ ಸುತ್ತಿಗೆ ಪ್ರವೇಶಿಸಲಿದೆ. ಕೋಸ್ಟರಿಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-7 ಗೋಲುಗಳಿಂದ ಹೀನಾಯವಾಗಿ ಸೋತಿತ್ತು.
ಬೆಲ್ಜಿಯಂಗೆ ಸುಲಭ ತುತ್ತಾಗುತ್ತಾ ಮೊರೊಕ್ಕೊ ?
ಎಫ್ ಗುಂಪಿನಲ್ಲಿ ಬಲಿಷ್ಠ ಬೆಲ್ಜಿಯಂ ತಂಡ ಮೊರೊಕ್ಕೊ ತಂಡವನ್ನು ಎದುರಿಸಲಿದೆ. ವಿಶ್ವ ರಾಂಕಿಂಗ್ನ ಎರಡನೆ ತಂಡ ಬೆಲ್ಜಿಯಂ ತಂಡ ಕೆನಡಾ ವಿರುದ್ಧ ಗೆದ್ದಿತ್ತು. ಮೊರೊಕ್ಕೊ ವಿರುದ್ಧವೂ ಗೆಲುವು ಸಾಸುವ ನೆಚ್ಚಿನ ತಂಡವಾಗಿದೆ. ಮೊರೊಕ್ಕೊ ತಂಡ ಕ್ರೊವೇಷಿಯಾ ವಿರುದ್ಧ ಡ್ರಾ ಸಾಸಿತ್ತು.
ಕ್ರೊವೇಷಿಯಾ, ಕೆನಡಾ ಫೈಟ್
ಮತ್ತೊಂದು ಎಫ್ ಗುಂಪಿನಲ್ಲಿ ಕ್ರೊವೇಷಿಯಾ ಕೆನಡಾ ತಂಡವನ್ನು ಎದುರಿಸಲಿದೆ. ಕ್ರೊವೇಷಿಯಾ ತನ್ನ ಮೊದಲ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಡ್ರಾ ಸಾಸಿತ್ತು. ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಕೆನಡಾ ತಂಡ ಬಲಿಷ್ಠ ಬೆಲ್ಜಿಯಂ ವಿರುದ್ಧ ಸೋತಿದ್ದರೂ ಉತ್ತಮ ಪೈಪೋಟಿ ನೀಡಿತ್ತು.