ಮಾರ್ಕಸ್ ರಾಶಫೋರ್ಡ್ ಅವರ ಎರಡು ಗೋಲುಗಳ ನೆರೆವಿನಿಂದ ಬಲಿಷ್ಠ ಇಂಗ್ಲೆಂಡ್ ತಂಡ ವೇಲ್ಸ್‍ವಿರುದ್ಧ 3-0 ಗೋಲುಗಳಿಂದ ಗೆದ್ದುಕೊಂಡಿದೆ.
ಈ ಗೆಲುವಿನೊಂದಿಗೆ ಆಂಗ್ಲರು ಪ್ರೀಕ್ವರ್ಟರ್ ಪ್ರವೇಶಿಸಿದ್ದಾರೆ. ವೇಲ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಅಹ್ಮದ್ ಬಿನ್ ಅಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ.
ಆದರೆ ಎರಡನೆ ಅವಯ 50ನೇ ನಿಮಿಷದಲ್ಲಿ ಇಂಗ್ಲೆಂಡ್‍ನ ರಾಶ ಫೋರ್ಡ್ ಗೋಲು ಹೊಡೆದು ಮುನ್ನಡೆ ನೀಡಿದರು. ಬಳಿಕ ಇದಾದ ಒಂದೇ ನಿಮಿಷದಲ್ಲಿ ತಂಡದ ಮತ್ತೋರ್ವ ಆಟಗಾರ ಫೊಡೆನ್ 51ನೇ ನಿಮಿಷದಲ್ಲಿ ಗೋಲು ಹೊಡೆದು ವೇಲ್ಸ್‍ಗೆ ಡಬಲ್ ಶಾಕ್ ನೀಡಿದರು.
ಮೊದಲಾರ್ಧದಲ್ಲಿ ವೇಲ್ಸ್ ತಂಡದ ತಾರಾ ಆಟಗಾರ ಗಾರೆತ್ ಬಾಲೆ ಯಾವುದೇ ಮ್ಯಾಜಿಕ್ ಮಾಡದ ಕಾರಣ ಅವರನ್ನು ಬದಲಾಯಿಸಲಾಯಿತು.
68ನೇ ನಿಮಿಷದಲ್ಲಿ ರಾಶ್ ಫೋರ್ಡ್ ಮತ್ತೆ ಗೋಲು ಹೊಡೆದು ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಇಂಗ್ಲೆಂಡ್ ತಂಡ 7 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಏಕೈಕ ಗೋಲಿನಿಂದ ಗೆದ್ದ ಯುಎಸ್
ಕ್ರಿಶ್ಚಿನ್ ಪುಲಿಸಿಕ್ ಅವರ ಏಕೈಕ ಗೋಲಿನ ನೆರವಿನಿಂದ ಯುಎಸ್ ತಂಡ ಇರಾನ್ ವಿರುದ್ಧ ಗೆಲುವು ದಾಖಲಿಸಿ ನಾಕೌಟ್‍ಗೆ ಅರ್ಹತೆ ಪಡೆದಿದೆ.
ಮೊದಲಾರ್ಧದಲ್ಲಿ ಚೆಂಡಿನ ಮೇಲೆ ಯುಎಸ್ ನಿಯಂತ್ರಣ ಸಾಧಿಸಿತು. 38ನೇ ನಿಮಿಷದಲ್ಲಿ ಪುಲಿಸಿಕ್ ಗೋಲು ಹೊಡೆದರು. ಗೋಲು ಹೊಡೆಯುವ ವೇಳೆ ಇರಾನ್ ಗೋಲ್‍ಕೀಪರ್
ಅಲಿರೆಜಾ ಬೀರಾನ್‍ವಾಂದ್‍ಗೆ ಡಿಕ್ಕಿ ಹೊಡೆದಿದ್ದರಿಂದ ಪುಲಿಸಿಕ್ ಗೋಲಿನ ಸಂಭ್ರಮ ಆಚರಿಸಲು ಆಗಲಿಲ್ಲ.