ಪಂದ್ಯದ 2ನೇ ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆ ಪಡೆದ ಹೊರತಾಗಿಯೂ ಕೆನಡಾ ತಂಡ ಕ್ರೋವೇಷಿಯಾ ವಿರುದ್ಧ 1-4 ಗೋಲುಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ.
ನಾಲ್ಕು ಗೋಲು ಹೊಡೆದ ಕ್ರೋವೇಷಿಯಾ ಎಫ್ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದ 2ನೇ ನಿಮಿಷದಲ್ಲೆ ಕೆನಡಾ ತಂಡದ ಆಲ್ಫೋನ್ಸಾ ಡೇವಿಸ್ ಗೋಲು ಹೊಡೆದು ಮುನ್ನಡೆ ನೀಡಿದರು. ನಂತರ 34ನೇ ನಿಮಿಷದಲ್ಲಿ ಕ್ರಾಮಾರಿಕ್ ಗೋಲು ಹೊಡೆದು ಸಮಗೊಳಿಸಿದರು.44ನೇ ನಿಮಿಷದಲ್ಲಿ ಕ್ರೋವೇಷಿಯಾ ತಂಡದ ಲಿವಾಜಾ ಗೋಲು ಹೊಡೆದರು.
ಎರಡನೆ ಅವಧಿಯಲ್ಲಿ ಸಮಬಲದ ಹೋರಾಟ ಕಂಡು ಬಂತು. ಆದರೆ 70ನೇ ನಿಮಿಷದಲ್ಲಿ ಕ್ರೋವೇಷಿಯಾದ ಕ್ರಮಾರಿಚ್ ಗೋಲು ಹೊಡೆದು ಅಂತರ ಹೆಚ್ಚಿಸಿದರು. ಹೆಚ್ಚುವರಿ ನಿಮಿಷದಲ್ಲಿ ಕ್ರೋವೇಷಿಯಾ ತಂಡ ಮಾಜೆರ್ ಗೋಲು ಹೊಡೆದು ತಂಡಕ್ಕೆ ಭರ್ಜರಿ ಗೆಲುವು ದೊರಕಿಸಿಕೊಟ್ಟರು.
ಎಫ್ ಗುಂಪಿನಲ್ಲಿರುವ ಕ್ರೋವೇಷಿಯಾ ನಾಕೌಟ್ ಹಂತಕ್ಕೇರಲು ಮೊರೊಕ್ಕೊ ಮತ್ತು ಬೆಲ್ಜಿಯಂ ಜೊತೆ ಸ್ಪರ್ಧೆಗೆ ಇಳಿದಿದೆ. ಅಂತಿಮ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸೆಣಸಲಿದೆ.