ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಟೀಂ ಇಂಡಿಯಾದ ‘ಮಿಸ್ಟರ್ 360*’ ಸೂರ್ಯಕುಮಾರ್ ಯಾದವ್(Surya Kumar Yadav) ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
2022ರಲ್ಲಿ ಅಮೋಘ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್, ತಮ್ಮ ಶ್ರೇಷ್ಠ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿರುವ ಸೂರ್ಯಕುಮಾರ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಿಕ್ಸರ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 2022ರಲ್ಲಿ ಆಡಿರುವ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈವರೆಗೂ 74 ಸಿಕ್ಸ್ಗಳನ್ನ ಸಿಡಿಸಿರುವ ಸೂರ್ಯಕುಮಾರ್, ಇದೀಗ ಟೀಂ ಇಂಡಿಯಾದ ʼಹಿಟ್ ಮ್ಯಾನ್ʼ ರೋಹಿತ್ ಶರ್ಮ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮ, ಕ್ಯಾಲೆಂಡರ್ ಇಯರ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿರುವ ದಾಖಲೆ ಹೊಂದಿದ್ದಾರೆ. 2019ರಲ್ಲಿ ರೋಹಿತ್ ಶರ್ಮ ಒಟ್ಟು 78 ಸಿಕ್ಸರ್ಗಳನ್ನ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದರು. ಇದೀಗ ರೋಹಿತ್ ಶರ್ಮ ಅವರ ದಾಖಲೆ ಬ್ರೇಕ್ ಮಾಡುವ ಹೊಸ್ತಿಲಲ್ಲಿರುವ ಸೂರ್ಯಕುಮಾರ್ ಯಾದವ್, ಇದಕ್ಕಾಗಿ ಐದು ಸಿಕ್ಸ್ಗಳನ್ನ ಬಾರಿಸಬೇಕಿದೆ.
ಆದರೆ ರೋಹಿತ್ ಶರ್ಮ ಅವರ ಈ ದಾಖಲೆಯನ್ನ ಬ್ರೇಕ್ ಮಾಡಲು ಸೂರ್ಯಕುಮಾರ್ ಯಾದವ್ ಅವರಿಗೆ ಒಂದೇ ಒಂದು ಪಂದ್ಯದ ಅವಕಾಶವಿದೆ. ಡಿಸೆಂಬರ್ ಮೊದಲ ವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಸೂರ್ಯಕುಮಾರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯೂಜಿ಼ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ಗೆ, ಈ ದಾಖಲೆ ಬ್ರೇಕ್ ಮಾಡುವ ಅವಕಾಶವಿದೆ.