ಉತ್ಸಾಹಿ ಆಸ್ಟ್ರೇಲಿಯಾ ತಂಡ ಟ್ಯುನೀಶಿಯಾ ವಿರುದ್ಧ 1-0 ಗೋಲಿನಿಂದ ಗೆಲ್ಲುವ ಮೂಲಕ ಟೂರ್ನಿಯನ್ನು ಜೀವಂತವಾಗಿರಿಸಿಕೊಂಡಿದೆ.
2010ರ ನಂತರ ಇದೇ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಅಸ್ಟ್ರೇಲಿಯಾ ಗೆದ್ದುಕೊಂಡಿದೆ.
ಅಲ್ ಜುನಾಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಅವಯಲ್ಲೆ ಗೋಲು ಹೊಡೆದು ಗೆಲುವು ದಾಖಲಿಸಿತು.
ಪಂದ್ಯದ ಮೊದಲ 15 ನಿಮಿಷದವರೆಗೂ ಆಸ್ಟ್ರೇಲಿಯಾ ಚೆಂಡಿನ ಮೇಲೆ ನಿಯಂತ್ರಣ ಸಾಸಿತ್ತುಘಿ. 19ನೇ ನಿಮಿಷದಲ್ಲಿ ಟ್ಯುನೀಶಿಯಾ ಗೋಲು ಹೊಡೆಯಲು ಅವಕಾಶವಿತ್ತು.
ಆದರೆ ಸಫಲವಾಗಿಲ್ಲ. 23ನೇ ನಿಮಿಷದಲ್ಲಿ ತಂಡದ ಕ್ರೇಗ್ ಗುಡ್ವಿನ್ ನೀಡಿದ ಚೆಂಡನ್ನು
ಆಸ್ಟ್ರೇಲಿಯಾದ ಮಿಚೆಲ್ ಡ್ಯುಕ್ ತಲೆ ಕೊಟ್ಟು ಗೋಲು ಹೊಡೆದರು.ತಲೆಯ ಮೂಲಕ ಗೋಲು ಹೊಡೆದ ಎರಡನೆ ಆಸ್ಟ್ರೇಲಿಯಾ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಈ ಗೆಲುವಿನೊಂದಿಗೆ ಡಿ ಗುಂಪಿನಲ್ಲಿ ಆಸ್ಟ್ರೇಲಿಯಾ ಎರಡನೆ ಸ್ಥಾನಕ್ಕೇರಿದೆ.