ಒಲಿಂಪಿಯನ್ ಸಿ.ಎ. ಭವಾನಿ ದೇವಿ ಇಲ್ಲಿ ನಡೆಯುತ್ತಿರುವ ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿ ಪದಕ ಖಚಿತಪಡಿಸಿದ್ದಾರೆ. ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಭಾರತ ಮೊದಲ ಫೆನ್ಸರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಸೋಮವಾರ ನಡೆದ ಮಹಿಳಾ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ವಿರುದ್ಧ 15-10 ಅಂಕಗಳಿಂದ ಗೆದ್ದರು.
ಸೆಮಿಫೈನಲ್ನಲ್ಲಿ ಭವಾನಿ ಉಜ್ಬೇಕಿಸ್ತಾನದ ಜಾಯ್ನಬ್ ದಯಿಬೆಕೊವಾ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ಭವಾನಿ ಒಜಾಕಿ ವಿರುದ್ಧ 15-11 ಅಂಕಗಳಿಂದ ಗೆಲುವು ಕಂಡಿದ್ದರು.
ಭಾವಾನಿ ಸಾಧನೆಗೆ ಫೆನ್ಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿನಂದಿಸಿದ್ದಾರೆ.
ಭವಾನಿ ಫೆನ್ಸಿಂಗ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಆಗಿದ್ದಾರೆ.