Rafael Nadal – ರಫೆಲ್ ನಡಾಲ್ ಸಾಧನೆಗೆ ಫೆಡರರ್, ಜಾಕೊವಿಕ್, ಸಚಿನ್ ಸಲಾಂ..
ರಫೆಲ್ ನಡಾಲ್ ಅವರ ಐತಿಹಾಸಿಕ ಸಾಧನೆಗೆ ರೋಜರ್ ಫೆಡರ್ ಮತ್ತು ನೊವಾಕ್ ಜಾಕೊವಿಕ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸ್ಪೇನ್ ರಫೆಲ್ ನಡಾಲ್ ಅವರು ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಎರಡನೇ ಬಾರಿ ಗೆದ್ದುಕೊಂಡಿದ್ದಾರೆ. ಈ ಮೂಲಕ ರಫೆಲ್ ನಡಾಲ್ ಅವರು ಗ್ರ್ಯಾಂಡ್ ಸ್ಲ್ಯಾಮ್ ಇತಿಹಾಸದಲ್ಲೇ 21 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ಅಷ್ಟೇ ಅಲ್ಲ, ರೋಜರ್ ಫೆಡರರ್ ಮತ್ತು ನೊವಾಕ್ ಜಾಕೊವಿಕ್ ಅವರನ್ನು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಸಂಖ್ಯೆಯಲ್ಲಿ ಹಿಂದಿಕ್ಕಿದ್ದಾರೆ. ರೋಜರ್ ಫೆಡರರ್ ಮತ್ತು ಜಾಕೊವಿಕ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಇದು ಎಂಥಾ ಪಂದ್ಯ. ನನ್ನ ಸ್ನೇಹಿತ ಮತ್ತು ಶ್ರೇಷ್ಠ ಪ್ರತಿಸ್ಪರ್ಧಿ ರಫೆಲ್ ನಡಾಲ್. ಇದೀಗ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದ ಗೆಳೆಯ ನಡಾಲ್ ಗೆ ಅಭಿನಂದನೆಗಳು ಎಂದು ರೋಜರ್ ಫೆಡರರ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
Federer, Djokovic, sachin tendulkar quick to congratulate Nadal
ಕೆಲವು ತಿಂಗಳುಗಳ ಹಿಂದೆ ನಾವಿಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದೇವು. ಚಾಂಪಿಯನ್ ಆಟಗಾರನನ್ನು ಎಂದಿಗೂ ಹಗುರವಾಗಿ ಪರಿಗಣಿಸಬೇಡಿ ಎಂದು ಫೆಡರರ್ ಹೇಳಿದ್ದಾರೆ.
ನಿಮ್ಮ ಬದ್ದತೆ, ಹೋರಾಟ ಮನೋಭಾವನೆ ನನಗೆ ಸ್ಪೂರ್ತಿಯಾಗಿದೆ. 18 ವರ್ಷಗಳಿಂದ ಪರಸ್ಪರ ಹೋರಾಟ ನಡೆಸಿಕೊಂಡು ನನ್ನ ಸಾಧನೆಗೂ ನೀವು ಸ್ಪೂರ್ತಿಯಾಗಿದ್ದೀರಿ. ನೀವು ಮುಂದಿನ ದಿನಗಳಲ್ಲಿ ನೀವು ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಫೆಡರರ್ ತನ್ನ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಂದಡೆ ರಫೆಲ್ ನಡಾಲ್ ಅವರ ಇನ್ನೊಬ್ಬ ಪ್ರತಿಸ್ಪರ್ಧಿ ನೊವಾಕ್ ಜಾಕೊವಿಕ್ ಕೂಡ ರಫೆಲ್ ನಡಾಲ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತ ಸಾಧನೆ. ಆಕ್ರಮಣಕಾರಿ ಮನೋಭಾವದ ಹೋರಾಟವು ಮತ್ತೊಂದು ಬಾರಿ ಮೇಲುಗೈ ಸಾಧಿಸಿದೆ ಎಂದು ನೊವಾಕ್ ಜಾಕೊವಿಕ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ರಫೆಲ್ ನಡಾಲ್ ಅವರ ಐತಿಹಾಸಿಕ ಸಾಧನೆಗೆ ಇಡೀ ಕ್ರೀಡಾ ಜಗತ್ತೇ ಸಲಾಂ ಹೊಡೆದಿದೆ. ಸಚಿನ್ ತೆಂಡುಲ್ಕರ್ ಸೇರಿದಂತೆ ಅನೇಕ ಕ್ರೀಡಾಪಟುಗಳು ರಫೆಲ್ ಸಾಧನೆಯನ್ನು ಕೊಂಡಾಡಿದ್ದಾರೆ.