ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ ಪರ ಬಿರುಸಿನ ಇನ್ನಿಂಗ್ಸ್ ಆಡಿದ ಶ್ರೀಲಂಕಾದ ಸ್ಫೋಟಕ ಬ್ಯಾಟ್ಸ್ಮನ್ ಭಾನುಕಾ ರಾಜಪಕ್ಸೆ ತಮ್ಮ ಫಿಟ್ನೆಸ್ ಬಗ್ಗೆ ವಿವಾದಕ್ಕೊಳಗಾಗಿದ್ದಾರೆ.
ಜನವರಿಯಲ್ಲಿ ರಾಜಪಕ್ಸೆ ನಿವೃತ್ತಿ ಘೋಷಿಸಿದ್ದರು. ಬಳಿಕ ಅಧಿಕಾರಿಗಳ ಒತ್ತಾಯದ ಮೇರೆಗೆ ನಿವೃತ್ತಿ ಹಿಂಪಡೆದರು. ಇದರ ಹೊರತಾಗಿಯೂ ಅವರು ಭಾರತದ ವಿರುದ್ಧದ ಸರಣಿಗೆ ಆಯ್ಕೆಯಾಗಿರಲಿಲ್ಲ. ರಾಜಪಕ್ಸೆ ಕಳೆದ ಕೆಲವು ದಿನಗಳಿಂದ ಫಿಟ್ನೆಸ್ ಬಗ್ಗೆ ನಿರಂತರ ಗಮನ ಹರಿಸುತ್ತಿದ್ದಾರೆ. ಅವರು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ತಮ್ಮ ಫಿಟ್ನೆಸ್ ಗುರು ಎಂದು ಪರಿಗಣಿಸಿದ್ದಾರೆ.
ಹರಾಜಿನಲ್ಲಿ 30 ವರ್ಷದ ಭಾನುಕಾ ಅವರನ್ನು 50 ಲಕ್ಷ ರೂ.ಗೆ ಪಂಜಾಬ್ ಖರೀದಿಸಿತ್ತು. ವಿರಾಟ್ ಕೊಹ್ಲಿಯಂತೆ ಫಿಟ್ನೆಸ್ನಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಭಾನುಕಾ ಕೊಹ್ಲಿಯನ್ನು ಕ್ರಿಕೆಟ್ನ ಕ್ರಿಸ್ಟಿಯಾನೋ ರೊನಾಲ್ಡೊ ಎಂದು ಬಣ್ಣಿಸಿದ್ದಾರೆ. 37 ವರ್ಷದ ರೊನಾಲ್ಡೊ ಅವರನ್ನು ಫುಟ್ಬಾಲ್ ಜಗತ್ತಿನ ಫಿಟೆಸ್ಟ್ ಆಟಗಾರ ಎಂದು ಪರಿಗಣಿಸಲಾಗಿದೆ.
ಭಾರತ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಕ್ರಾಂತಿಯನ್ನು ತಂದ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ. 33 ವರ್ಷ ವಯಸ್ಸಿ ಕೊಹ್ಲಿ ಸುಮಾರು ಒಂದು ದಶಕದಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. “ಐಪಿಎಲ್ ವಿಶ್ವದ ಅತ್ಯುತ್ತಮ ಲೀಗ್ ಮತ್ತು ನೀವು ಪ್ರತಿಯೊಬ್ಬ ಸಹ ಆಟಗಾರರಿಂದ ಬಹಳಷ್ಟು ಕಲಿಯುವಿರಿ. ನಾನು ಶಿಖರ್ ಧವನ್ ಅವರಿಂದ ಬಹಳಷ್ಟು ಕಲಿಯುತ್ತಿದ್ದೇನೆ. ನಾನು ಮಯಾಂಕ್ ಅಗರ್ ವಾಲ್ ಅವರೊಂದಿಗೆ ತುಂಬಾ ಒಳ್ಳೆಯ ಸಂಬಂಧ ಹೊಂದಿದ್ದೇನೆ” ಎಂದು ಭಾನುಕ ತಿಳಿಸಿದ್ದಾರೆ.
“ಪಂದ್ಯದ ಬಳಿಕ, ವಿರಾಟ್ ಕೊಹ್ಲಿ ಜೊತೆ ನಾನು ಫಿಟ್ನೆಸ್ ಬಗ್ಗೆ ಮಾತನಾಡಬಹುದು ಮತ್ತು ಕೆಲವು ಸಲಹೆಗಳನ್ನು ಪಡೆಯಬಹುದು. ಫಿಟ್ನೆಸ್ ವಿಷಯಕ್ಕೆ ಬಂದಾಗ, ಅವರು ಗ್ರೇಟ್. ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೊ ಎಂದು ಬಣ್ಣಿಸಿದ್ದಾರೆ. ಅವರು ಪಡುವ ಪರಿಶ್ರಮ ಕಣ್ಣೆದುರಿಗೆ ಕಾಣುತ್ತದೆ. ಫಿಟ್ನೆಸ್ ವಿಚಾರ ಎಂದು ಬಂದಾಗ ಕೊಹ್ಲಿ ಅವರನ್ನು ನೀವು ಯಾರ ಜೊತೆಗಾದರೂ ಹೊಲಿಸಬಹುದು” ಎಂದು ರಾಜಪಕ್ಸೆ ತಿಳಿಸಿದ್ದಾರೆ.