ಟಿ-20 ಕ್ರಿಕೆಟ್ – ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ವೆಸ್ಟ್ ಇಂಡೀಸ್
ಜೇಸನ್ ಹೋಲ್ಡರ್ ಅವರ ಮಾರಕ ಬೌಲಿಂಗ್ ದಾಳಿಯ ನೆರವನ್ನು ಪಡೆದ ವೆಸ್ಟ್ ಇಂಡೀಸ್ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್ ಗಳಿಂದ ಪರಾಭವಗೊಳಿಸಿತು.
ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಢ್ ತಂಡ ಆಘಾತದ ಮೇಲೆ ಆಘಾತ ಅನುಭವಿಸಿತ್ತು. ಒಂದು ಹಂತದಲ್ಲಿ 39 ರನ್ ಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಇಂಗ್ಲೆಂಡ್ ತಂಡ 19.4 ಓವರ್ ಗಳಲ್ಲಿ 103 ರನ್ ಗಳಿಗೆ ಸರ್ವಪತನಗೊಂಡಿತ್ತು.
ವೆಸ್ಟ್ ಇಂಡೀಸ್ ತಂಡದ ಪರ ಜೇಸನ್ ಹೋಲ್ಡರ್ ನಾಲ್ಕು ವಿಕೆಟ್ ಪಡೆದ್ರು. ಹಾಗೇ ಶೆಲ್ಡನ್ ಕಾಟ್ರ್ರೆಲ್ ಎರಡು ವಿಕೆಟ್ ಉರುಳಿಸಿದ್ರು. ಆಕಿಯಲ್ ಹುಸೇನ್ , ರೊಮಾರಿಯೊ ಮತ್ತು ಫ್ಯಾಬಿಯನ್ ಆಲೆನ್ ತಲಾ ಒಂದೊಂದು ವಿಕೆಟ್ ಪಡೆದ್ರು.
ಗೆಲ್ಲಲು ಸುಲಭ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ 17.1 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ವೆಸ್ಟ್ ಇಂಡೀಸ್ ತಂಡದ ಪರ ಬ್ರೆಂಡನ್ ಕಿಂಗ್ ಅಜೇಯ 52 ರನ್ ದಾಖಲಿಸಿದ್ರು. ಹಾಗೇ ಶಾಯ್ ಹೋಪ್ 20 ರನ್ ಹಾಗೂ ನಿಕೊಲಾಸ್ ಪೂರನ್ ಅಜೇಯ 27 ರನ್ ದಾಖಲಿಸಿದ್ರು.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯದ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ ಇದೀಗ 1-0ಯಿಂದ ಮುನ್ನಡೆಯಲ್ಲಿದೆ.