ಹಜ್ ಯಾತ್ರೆ ಕೈಕೊಳ್ಳಲಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಲೆಗ್ ಸ್ಪಿನ್ ಬೌಲರ್ ಅದಿಲ್ ರಶೀದ್, ಭಾರತ ವಿರುದ್ಧ ನಡೆಯಲಿರುವ ಟಿ-20 ಹಾಗೂ ಏಕದಿನ ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ಮೆಕ್ಕಾಕ್ಕೆ ತೆರಳಲು ಇಂಗ್ಲೆಂಡ್ ಕ್ರಿಕೆಟ್ ಕ್ರಿಕೆಟ್ ಮಂಡಳಿ (ಇಸಿಬಿ) ಅದಿಲ್ ರಶೀದ್‌ಗೆ ಅನುಮತಿ ನೀಡಿದೆ.

ಹಜ್ ಯಾತ್ರಿ ಕೈಕೊಳ್ಳಲು ಶನಿವಾರ ರಶೀದ್, ಸೌಧಿ ಅರೇಬಿಯಾಕ್ಕೆ ತೆರಳಲಿದ್ದಾರೆ. ಹೀಗಾಗಿ ಅವರು ಯಾರ್ಕ್ಷೈರ್‌ನ ಟಿ-20 ಬ್ಲಾಸ್ಟ್ ಪಂದ್ಯಾವಳಿಯ ಕೊನೆಯ ಅಂತದ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ. ಹಜ್ ಯಾತ್ರೆ ಕೈಕೊಳ್ಳಲು ನಾನು ಹಲವು ವರ್ಷಗಳಿಂದ ಬಯಸಿದ್ದೆ. ಆದರೆ ಇದನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ ಎಂದು ಅದಿಲ್ ರಶೀದ್ ಹೇಳಿದ್ದಾರೆ.
ಮೆಕ್ಕಾ ಪ್ರವಾಸ ಕುರಿತು ನಾನು ಇಸಿಬಿ ಹಾಗೂ ಯಾರ್ಕ್ಷೈರ್ ಕ್ರಿಕೆಟ್ ಮಂಡಳಿಯ ಜೊತೆಗೆ ಚರ್ಚಿಸಿ ಒಪ್ಪಿಗೆ ಪಡೆದಿರುವೆ ಎಂದು ಅವರು ವಿವರಿಸಿದ್ದಾರೆ. ನಾನು, ನನ್ನ ಹೆಂಡತಿ ಜೊತೆಗೂಡಿ ಹಜ್ ಯಾತ್ರೆ ಕೈಕೊಳ್ಳುತ್ತಿದ್ದು, ಕೆಲ ವಾರಗಳ ಕಾಲ ಪ್ರವಾಸ ಕೈಕೊಳ್ಳುತ್ತಿದ್ದೇವೆ ಎಂದು ರಶೀದ್ ಹೇಳಿದರು.

ನನ್ನ ಪಾಲಿಗೆ ಇದೊಂದು ಅಪೂರ್ವ ಕ್ಷಣ. ಓರ್ವ ಮುಸ್ಲಿಂ ಆಗಿ ಪವಿತ್ರ ಹಜ್ ಯಾತ್ರೆ ಕೈಕೊಳ್ಳಲು ಮುಂದಾಗಿರುವೆ ಎಂದು ಇಂಗ್ಲೆಂಡ್ ತಂಡದ ಅನುಭವಿ ಲೆಗ್ ಸ್ಪಿನ್ ಬೌಲರ್ ಅದಿಲ್ ರಶೀದ್ ತಿಳಿಸಿದ್ದಾರೆ. ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ಭಾರತ ತಂಡಗಳ ನಡುವೆ ಜುಲೈ 7 ರಿಂದ 17 ರ ಅವಧಿಯಲ್ಲಿ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.