ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಲೆಕ್ಕಾಚಾರ ಶುರುವಾಗಿದೆ. ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ, ಇಂಗ್ಲೆಂಡ್ ಭವಿಷ್ಯವೂ ತೂಗುಯ್ಯಲೆಯಲ್ಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಅಜೇಯ ಆಟ ಆಡುತ್ತಿದ್ದರೆ, ಭಾರತ ಮತ್ತು ನ್ಯೂಜಿಲೆಂಡ್ ಲೆಕ್ಕಾಚಾರದಲ್ಲೇ ಮುನ್ನಡೆಯುತ್ತಿವೆ.
ಆಸ್ಟ್ರೇಲಿಯಾ 3 ಪಂದ್ಯಗಳಿಂದ 3 ಗೆಲುವು ದಾಖಲಿಸಿ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. + 1.626 ರನ್ ರೇಟ್ ಹೊಂದಿದೆ. ಆಸ್ಟ್ರೇಲಿಯಾ ಇನ್ನು ಭಾರತ, ವೆಸ್ಟ್ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಪಂದ್ಯ ಆಡಲಿದೆ.
ದಕ್ಷಿಣ ಆಫ್ರಿಕಾ ತಂಡವೂ 3 ಪಂದ್ಯಗಳನ್ನು ಆಡಿ 3 ಪಂದ್ಯಗಳನ್ನು ಗೆದ್ದು 6 ಅಂಕ ಪಡೆದಿದೆ. ಆಸ್ಟ್ರೇಲಿಯಾ, ಭಾರತ, ವೆಸ್ಟ್ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ.
3ನೇ ಸ್ಥಾನದಲ್ಲಿ ಭಾರತ ಇದೆ. 3 ಪಂದ್ಯಗಳಿಂದ 2 ಗೆದ್ದು 4 ಅಂಕ ಪಡೆದುಕೊಂಡಿದೆ. ಭಾರತ ಇನ್ನು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಆಡಬೇಕಿದೆ.
ಆತಿಥೇಯ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ, ಕಿವೀಸ್ 4 ಪಂದ್ಯಗಳಿಂದ 2 ಗೆದ್ದು 2 ಸೋತು 4 ಅಂಕ ಪಡೆದಿದೆ. ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಆಡಬೇಕಿದೆ.
ವೆಸ್ಟ್ಇಂಡೀಸ್ 3 ಪಂದ್ಯಗಳಿಂದ 4 ಅಂಕ ಪಡೆದಿದೆ. ಸದ್ಯ 5ನೇ ಸ್ಥಾನದಲ್ಲಿರುವ ವಿಂಡೀಸ್ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಆಡಬೇಕಿದೆ.
ಬಾಂಗ್ಲಾದೇಶ 3 ಪಂದ್ಯಗಳಿಂದ 2 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಬಾಂಗ್ಲಾ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವಿಂಡೀಸ್ ವಿರುದ್ಧ ಪಂದ್ಯ ಆಡಲಿದೆ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕೊನೆಯ ಎರಡು ಸ್ಥಾನದಲ್ಲಿದೆ. ಇಂಗ್ಲೆಂಡ್ 3ಕ್ಕೆ ಮೂರೂ ಪಂದ್ಯಗಳನ್ನು ಸೋತಿದ್ದರೆ, ಪಾಕಿಸ್ತಾನ 4ಕ್ಕೆ ನಾಲ್ಕೂ ಪಂದ್ಯವನ್ನೂ ಸೋತಿದೆ. ಇಂಗ್ಲೆಂಡ್ ಇನ್ನು 4 ಪಂದ್ಯಗಳನ್ನು ಆಡಬೇಕಿದ್ದರೆ, ಟೂರ್ನಿಯಿಂದ ಹೊರ ಬಿದ್ದಿರುವ ಪಾಕಿಸ್ತಾನ 3 ಪಂದ್ಯಗಳನ್ನು ಆಡಬೇಕಿದೆ.