IPL 2022ರ ಆರಂಭಕ್ಕೆ ಉಳಿದಿರುವುದು ಕೇವಲ 12 ದಿನ ಮಾತ್ರ. ಫ್ರಾಂಚೈಸಿಗಳು ಆಟಗಾರರ ಹರಾಜಿನಲ್ಲಿ ವಿದೇಶಿ ಆಟಗಾರರನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದವು. ತಂಡವನ್ನು ಬ್ಯಾಲೆನ್ಸ್ ಮಾಡಿದ್ದವು. ಆದರೆ ಈಗ ಹಲವು ವಿದೇಶಿ ಆಟಗಾರರು ಮೊದಲ ವಾರ ಹಲವು ಫ್ರಾಂಚೈಸಿಗಳಿಗೆ ಕೈ ಕೊಟ್ಟಿದ್ದಾರೆ. ಮೊದಲ ವಾರ ಒಟ್ಟು 26 ವಿದೇಶಿ ಆಟಗಾರರು ಐಪಿಎಲ್ನಲ್ಲಿ ಆಡುತ್ತಿಲ್ಲ.
ಹಲವು ಆಟಗಾರರು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವವರೇ ಆಗಿದ್ದಾರೆ. ಇದು ಫ್ರಾಂಚೈಸಿಗಳ ರಣತಂತ್ರದ ಮೇಲೆ ಪ್ರಭಾವ ಬೀರಲಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಆಟಗಾರರು ಮೊದಲ ವಾರ ಲಭ್ಯವಾಗದೇ ಇರುವುದರಿಂದ ಹೆಚ್ಚಿನ ಫ್ರಾಂಚೈಸಿಗಳಿಗೆ ತಲೆನೋವು ಶುರುವಾಗಿದೆ. ಕೆಲವು ಆಟಗಾರರು ವೈಯಕ್ತಿಕ ಕಾರಣಗಳಿಂದ ಮೊದಲ ವಾರ ಲಭ್ಯ ಇಲ್ಲದಿದ್ದರೆ, ಇನ್ನು ಕೆಲವು ಆಟಗಾರರು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದಾರೆ.
ಡಿಸಿ ಮತ್ತು ಲಕ್ನೋಗೆ ದೊಡ್ಡ ಲಾಸ್..!
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಅತೀ ಹೆಚ್ಚು ಆಟಗಾರರನ್ನು ಕಳೆದುಕೊಳ್ಳಲಿದೆ. ಮೊದಲ ವಾರ ಈ ಫ್ರಾಂಚೈಸಿಗಳಿಗೆ ತಲಾ 5 ಆಟಗಾರರು ಅಲಭ್ಯರಾಗಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ನಿಂದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಅನ್ರಿಚ್ ನೋರ್ಟ್ಜೆ, ಮುಸ್ತಾಫಿಜುರ್ ರೆಹಮಾನ್ ಮತ್ತು ಲುಂಗಿ ಎನ್ಗಿಡಿ ಅವರ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ. ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೈಲ್ ಮೈಯರ್ಸ್, ಮಾರ್ಕ್ ವುಡ್ ಮತ್ತು ಕ್ವಿಂಟನ್ ಡಿ ಕಾಕ್ ಲಕ್ನೋ ತಂಡದಿಂದ ಮೊದಲ ವಾರ ಹೊರಗಿರಲಿದ್ದಾರೆ.
ಜಾನಿ ಬೈರ್ಸ್ಟೋವ್, ಕಗಿಸೊ ರಬಾಡ ಮತ್ತು ನಾಥನ್ ಎಲ್ಲಿಸ್ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೊದಲ ವಾರ ಕಾಣಿಸಿಕೊಳ್ಳುವುದಿಲ್ಲ. ಆರ್ಸಿಬಿಗೆ ಗ್ಲೆನ್ ಮ್ಯಾಕ್ಸ್ವೆಲ್, ಜೋಸ್ ಹ್ಯಾಜಲ್ವುಡ್ ಮತ್ತು ಬೆಹನ್ ಡ್ರೂಫ್ ಅಲಭ್ಯ ರಾಗಲಿದ್ದಾರೆ. SRH ಏಡಿಯನ್ ಮಾರ್ಕ್ ರಾಂ, ,ಶಾನ್ ಅಬಾಟ್ ಮತ್ತು ಮಾರ್ಕೊ ಜೆನ್ಸನ್ ಸೇವೆ ಕಳೆದುಕೊಳ್ಳಲಿದೆ.
ರಾಜಸ್ಥಾನ ರಾಯಲ್ಸ್ನಿಂದ ರಾಸಿ ವಾನ್ ಡೆರ್ ಡ್ಯುಸನ್, ಕೆಕೆಆರ್ನಿಂದ ಆರನ್ ಫಿಂಚ್ ಮತ್ತು ಪ್ಯಾಟ್ ಕಮ್ಮಿನ್ಸ್. ಸಿಎಸ್ಕೆಯಿಂದ ಡ್ವೇನ್ ಪ್ರಿಟೋರಿಯಸ್ ಹೊರಗುಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್ನ ಜೋಫ್ರಾ ಆರ್ಚರ್ ಮೊದಲ ವಾರದ ಪಂದ್ಯಗಳಿಗೆ ಗೈರಾಗಲಿದ್ದಾರೆ.