England county cricket – ಫೈವ್ ಸ್ಟಾರ್ ಸೈನಿ.. ಕೆಂಟ್ ಆಟಗಾರಿಂದ ಗೌರವ

ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಭಾರತದ ಆಟಗಾರರು ಮಿಂಚು ಹರಿಸುತ್ತಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರು ಸಸೆಕ್ಸ್ ತಂಡದ ರನ್ ಮೆಷಿನ್ ಆಗಿ ಹೊರಹೊಮ್ಮಿದ್ದಾರೆ. ಏಳು ಪಂದ್ಯಗಳ ಹತ್ತು ಇನಿಂಗ್ಸ್ ಗಳಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಲ್ಲದೆ ಮೂರು ದ್ವಿಶತಕ ಸೇರಿ ಒಟ್ಟು ಐದು ಶತಕಗಳನ್ನು ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ ಕೆಂಟ್ ಕೌಂಟಿ ತಂಡದ ಪರ ಆಡುತ್ತಿರುವ ಟೀಮ್ ಇಂಡಿಯಾದ ವೇಗಿ ನವದೀಪ್ ಸೈನಿ ಕೂಡ ಮಿಂಚು ಹರಿಸಿದ್ದಾರೆ. ವಾರ್ವಿಕ್ ಶೇರ್ ತಂಡದ ವಿರುದ್ದ ಸೈನಿ ಐದು ವಿಕೆಟ್ ಗಳನ್ನು ಉರುಳಿಸಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಗಳ ಗೊಂಚಲು ಪಡೆದುಕೊಂಡಿರುವ ಸೈನಿ ಅವರನ್ನು ಕೆಂಟ್ ತಂಡದ ಆಟಗಾರರು ಗೌರವಿಸಿದ್ದಾರೆ.

ನವದೀಪ್ ಸೈನಿ ಅವರು ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿದ್ದರು. ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಸೈನಿ ಅವರು ಆಡಿದ್ದರು. ಆನಂತರ ಅವರು ಕೆಂಟ್ ಕೌಂಟಿ ತಂಡದ ಜೊತೆ ಒಪ್ಪಂದ ಮಾಡಿಕೊಂಡರು.
ಈಗಾಗಲೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ನವದೀಪ್ ಸೈನಿ ಅವರು ತನ್ನ ಬೌಲಿಂಗ್ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಇಂಗ್ಲೆಂಡ್ ಕೌಂಟಿ ತಂಡದ ಪರ ಆಡುತ್ತಿದ್ದಾರೆ.