ದಾವಿದ್ ಮಲನ್ ಅವರ ಸ್ಫೋಟಕ ಅರ್ಧ ಶತಕದ ನೆರೆವಿನಿಂದ ಇಂಗ್ಲೆಂಡ್ ತಂಡ ಆತಿಥೇಯ ಪಾಕಿಸ್ತಾನ ವಿರುದ್ಧ 67 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಆಂಗ್ಲರು 4-3 ಅಂತರದಿಂದ ಟಿ20 ಸರಣಿ ಗೆದ್ದುಕೊಂಡಿದೆ.
ಲಾಹೋರ್ನ ಗಡಾಫಿ ಮೈದಾನದಲ್ಲಿ ನಡೆದ 7ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ಸೋಲಿಗೆ ಶರಣಾಯಿತು.
ಇಂಗ್ಲೆಂಡ್ ಪರ ಫಿಲ್ ಸಾಲ್ಟ್ 20, ಅಲೆಕ್ಸ್ ಹೇಲ್ಸ್ 18, ದಾವಿದ್ ಮಲನ್ 47 ಎಸೆತದಲ್ಲಿ 8 ಬೌಂಡರಿ 3 ಸಿಕ್ಸರ್ ಸಹಿತಿ ಅಜೇಯ 78 ರನ್ ಗಳಿಸಿದರು. ಬೆನ್ ಡಕೆಟ್ 30, ಹ್ಯಾರಿ ಬ್ರೂಕ್ ಅಜೇಯ 46 ರನ್ ಪೇರಿಸಿದರು.
210 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಪಾಕ್ ತಂಡದ ಪರ ಮೊಹ್ಮದ್ ರಿಜ್ವಾನ್ 1, ನಾಯಕ ಬಾಬರ್ ಅಜಂ 4, ಶಾನ್ ಮಸೂದ್ 43 ಎಸೆತದಲ್ಲಿ 4 ಬೌಂಡರಿ 1 ಸಿಕ್ಸರ್ ಸಹಿತ 56 ರನ್, ಇಫ್ತಿಕರ್ ಅಹಮದ್ 19, ಅಸೀಫ್ ಅಲಿ 7 ರನ್ ಗಳಿಸಿದರು. ನಂತರ ಬಂದ ಬ್ಯಾಟರ್ ಗಳು ಒಂದಂಕಿ ರನ್ ಹೊಡೆದರು.
ಇಂಗ್ಲೆಂಡ್ ಪರ ವೇಗಿ ಕ್ರಿಸ್ ವೋಕ್ಸ್ 26ಕ್ಕೆ 3, ಡೇವಿಡ್ ವಿಲ್ಲಿ 22ಕ್ಕೆ 2,ರೀಸೆ ಟಾಪ್ಲೆ, ಆದಿಲ್ ರಶೀದ್ ಮತ್ತು ಸಾಮ್ ಕರನ್ ತಲಾ 1 ವಿಕೆಟ್ ಪಡೆದರು.
ದಾವದ್ ಮಲನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ ಹ್ಯಾರಿ ಬ್ರೂಕ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು,
England Won T20 Series