ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿರುವ ಇಂಗ್ಲೆಂಡ್, ಮೊದಲ ಟೆಸ್ಟ್ ಪಂದ್ಯಕ್ಕಾಗಿ 12 ಮಂದಿ ಆಟಗಾರರ ಹೆಸರನ್ನ ಪ್ರಕಟಿಸಿದೆ.
ಕೆರೆಬಿಯನ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯಕ್ಕಾಗಿ ಇಂಗ್ಲೆಂಡ್ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಆದರೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಒಲಿ ರಾಬಿನ್ಸನ್ ಅವರನ್ನು 12 ಮಂದಿ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಅಂತಿಮವಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನ್ನ ಕಣಕ್ಕಿಳಿಸಲಿದೆ ಎಂಬುದು ಪಂದ್ಯದ ಟಾಸ್ ವೇಳೆ ಗೊತ್ತಾಗಲಿದೆ.
ಉಭಯ ತಂಡಗಳ ನಡುವಿನ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದೆ. ಸರಣಿಯ ಮೊದಲ ಪಂದ್ಯ ಮಾರ್ಚ್ 8ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಮಾರ್ಚ್ 16ರಂದು ಬ್ರಿಡ್ಜ್ಟೌನ್ನಲ್ಲಿ ನಡೆಯಲಿದ್ದು, ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 24ರಂದು ಸೆಂಟ್ ಜಾರ್ಜ್ಸ್ನಲ್ಲಿ ನಡೆಯಲಿದೆ.
ಇಂಗ್ಲೆಂಡ್ ತಂಡ: ಜೋ ರೂಟ್(ನಾಯಕ), ಜಾನಿ ಬೈರ್ಸ್ಟೋವ್, ಜ್ಯಾಕ್ ಕ್ರಾಲಿ, ಬೆನ್ ಫೋಕ್ಸ್(ವಿಕೆಟ್ ಕೀಪರ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಅಲೆಕ್ಸ್ ಲೀಸ್, ಶಕಿಬ್ ಮಹಮೂದ್, ಕ್ರೇಗ್ ಓವರ್ಟನ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ಹಾಗೂ ಮಾರ್ಕ್ ವುಡ್.