ವಿಶ್ವ ಕ್ರಿಕೆಟ್ನ ಸರ್ವಶ್ರೇಷ್ಠ ಫಾಸ್ಟ್ ಬೌಲರ್ಗಳಲ್ಲಿ ಮಿಂಚು ಹರಿಸಿರುವ ಇಂಗ್ಲೆಂಡ್ನ ವೇಗಿ ಜೇಮ್ಸ್ ಆಂಡರ್ಸನ್, ಟೆಸ್ಟ್ ಕ್ರಿಕೆಟ್ನಲ್ಲಿ 650 ವಿಕೆಟ್ಗಳ ಗಡಿದಾಟಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ನ್ಯೂಜಿ಼ಲೆಂಡ್ ವಿರುದ್ಧ ನಾಟಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನ 4ನೇ ದಿನದಾಟದಲ್ಲಿ ಟಾಮ್ ಲಾಥಂ ವಿಕೆಟ್ ಪಡೆಯುವ ಮೂಲಕ ಜೇಮ್ಸ್ ಆಂಡರ್ಸನ್, 650 ವಿಕೆಟ್ಗಳ ಗಡಿದಾಟಿದರು. ಆ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೂರನೇ ಹಾಗೂ ಮೊದಲ ವೇಗದ ಬೌಲರ್ ಎಂಬ ಹಿರಿಮೆಗೆ ಆಂಡರ್ಸನ್ ಪಾತ್ರರಾದರು.
ಇಂಗ್ಲೆಂಡ್ ತಂಡದ ಬೌಲಿಂಗ್ ಅಸ್ತ್ರವಾಗಿರುವ ಜೇಮ್ಸ್ ಆಂಡರ್ಸನ್, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದಿರುವ ವೇಗದ ಬೌಲರ್ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಉಳಿದಂತೆ ಶ್ರೀಲಂಕಾದ ಸ್ಪಿಗ್ ದಿಗ್ಗಜ ಮುತ್ತಯ್ಯ ಮುರುಳೀಥರನ್(800) ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್(708) ವಿಕೆಟ್ಗಳ ಸಾಧನೆಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
39 ವರ್ಷದ ಜೇಮ್ಸ್ ಆಂಡರ್ಸನ್ 171 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 26.47ರ ಸರಾಸರಿಯಲ್ಲಿ 650 ವಿಕೆಟ್ ಪಡೆದಿದ್ದಾರೆ. 31 ಬಾರಿ 5 ವಿಕೆಟ್ ಕಬಳಿಸಿರುವ ಆಂಡರ್ಸನ್, 3 ಬಾರಿ 10 ವಿಕೆಟ್ ಪಡೆದಿದ್ದಾರೆ. 7/42 ಇಂಗ್ಲೆಂಡ್ ವೇಗಿಯ ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ.