ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್, ಟೆಸ್ಟ್ ಕ್ರಿಕೆಟ್ನಲ್ಲಿ ಹೊಸದೊಂದು ಮೈಲುಗಲ್ಲು ತಲುಪಿದ್ದಾರೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದಲೇ ಮಿಂಚಿರುವ ಸ್ಟಾರ್ ಆಲ್ರೌಂಡರ್, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಆಡಂ ಗಿಲ್ಕ್ರಿಸ್ಟ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ನ್ಯೂಜಿ಼ಲೆಂಡ್ ವಿರುದ್ಧ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಿರುಸಿನ ಆಟವಾಡಿದ ಬೆನ್ ಸ್ಟೋಕ್ಸ್ ಈ ಸಾಧನೆ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸ್ಟೋಕ್ಸ್ 13 ಬಾಲ್ಗಳಲ್ಲಿ 1 ಬೌಂಡರಿ, 1 ಸಿಕ್ಸ್ ನೆರವಿನಿಂದ 18 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 100ನೇ ಸಿಕ್ಸರ್ ದಾಖಲಿಸಿದ ಸ್ಟೋಕ್ಸ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್ಕ್ರಿಸ್ಟ್(100 ಸಿಕ್ಸ್) ಅವರ ದಾಖಲೆಯನ್ನು ಸರಿಗಟ್ಟಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದಲೇ ಗಮನ ಸೆಳೆದಿದ್ದ ಆಡಂ ಗಿಲ್ಕ್ರಿಸ್ಟ್ 137 ಇನ್ನಿಂಗ್ಸ್ನಲ್ಲಿ 100 ಸಿಕ್ಸ್ಗಳಿಸಿದ್ದರೆ. ಬೆನ್ ಸ್ಟೋಕ್ಸ್ 151ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ನ್ಯೂಜಿ಼ಲೆಂಡ್ನ ಸ್ಪೋಟಕ ಬ್ಯಾಟ್ಸ್ಮನ್ ಬ್ರೆಂಡನ್ ಮೆಕ್ಕಲಂ 176 ಇನ್ನಿಂಗ್ಸ್ಗಳಲ್ಲಿ 107 ಸಿಕ್ಸರ್ಗಳನ್ನು ಬಾರಿಸುವ ಮೂಲಕ ನಂ.1 ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿರುವ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಪ್ರಸ್ತುತ 3ನೇ ಸ್ಥಾನದಲ್ಲಿರುವ ಬೆನ್ ಸ್ಟೋಕ್ಸ್, ಇದೀಗ ಬ್ರೆಂಡನ್ ಮೆಕ್ಕಲಂ ದಾಖಲೆಯನ್ನು ಮುರಿಯುವ ನಿರೀಕ್ಷೆಯಲ್ಲಿದ್ದಾರೆ.
ವಿಶ್ವ ಕ್ರಿಕೆಟ್ನ ಶ್ರೇಷ್ಠ ಆಟಗಾರರಾದ ಆಡಂ ಗಿಲ್ಕ್ರಿಸ್ಟ್ ಹಾಗೂ ಬ್ರೆಂಡನ್ ಮೆಕ್ಕಲಂ ಸ್ಪೋಟಕ ಬ್ಯಾಟಿಂಗ್ನಿಂದ ಮೋಡಿ ಮಾಡಿದ್ದರು. ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ಹಾದಿಯಲ್ಲೇ ಸಾಗುತ್ತಿರುವ ಬೆನ್ ಸ್ಟೋಕ್ಸ್, ತಂಡದ ನಾಯಕತ್ವದ ಜವಾಬ್ದಾರಿ ಹೊತ್ತ ನಂತರ ಬಿರುಸಿನ ಬ್ಯಾಟಿಂಗ್ ಮೂಲಕ ರನ್ಗಳಿಸುವ ತಂತ್ರವನ್ನ ಅನುಸರಿಸುತ್ತಿದ್ದಾರೆ. ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್, ನ್ಯೂಜಿ಼ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯದಲ್ಲೂ ಜವಾಬ್ದಾರಿಯುತ ಆಟವಾಡಿದ್ದರು.
ಅತಿಹೆಚ್ಚು ಸಿಕ್ಸ್ಗಳು – ಟೆಸ್ಟ್ ಕ್ರಿಕೆಟ್ನಲ್ಲಿ
ಬ್ರೆಂಡನ್ ಮೆಕ್ಕಲಂ – 107
ಆಡಂ ಗಿಲ್ಕ್ರಿಸ್ಟ್ – 100
ಬೆನ್ ಸ್ಟೋಕ್ಸ್ – 100*
ಕ್ರಿಸ್ ಗೇಯ್ಲ್ – 98
ಜಾಕ್ ಕಾಲಿಸ್ – 97