ಅತಿಥೇಯ ಇಂಗ್ಲೆಂಡ್ (England) ವಿರುದ್ಧದ ಮೊದಲ ODI ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma), ಹೊಸದೊಂದು ಮೈಲುಗಲ್ಲು ದಾಟಿದ್ದಾರೆ.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ(ಅಜೇಯ 76 ರನ್) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆ ಮೂಲಕ ನ್ಯೂಜಿ಼ಲೆಂಡ್ ತಂಡದ ನಾಯಕ ಕೇನ್ ವಿಲಿಯಂಸನ್ ಅವರನ್ನ ಹಿಂದಿಕ್ಕಿದ ಹಿಟ್ ಮ್ಯಾನ್, ಇಂಗ್ಲೆಂಡ್ ನೆಲದಲ್ಲಿ ODIನಲ್ಲಿ ಅತಿಹೆಚ್ಚು ರನ್ಗಳಿಸಿದ ಪ್ರವಾಸಿ ತಂಡದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಬಿರುಸಿನ ಬ್ಯಾಟಿಂಗ್ ಮೂಲಕ 76* ರನ್ಗಳಿಸಿದ ರೋಹಿತ್ ಶರ್ಮಾ, ಆ ಮೂಲಕ ಕೇನ್ ವಿಲಿಯಂಸನ್ (Kane Williamson) ಅವರು 23 ಇನ್ನಿಂಗ್ಸ್ಗಳಲ್ಲಿ ಗಳಿಸಿದ್ದ 1393 ರನ್ಗಳನ್ನ ಹಿಂದಿಕ್ಕಿದರು. ಸದ್ಯ ಟೀಂ ಇಂಡಿಯಾ ಕ್ಯಾಪ್ಟನ್ 25 ಇನ್ನಿಂಗ್ಸ್ಗಳಿಂದ 1411 ರನ್ಗಳಿಸಿದ್ದಾರೆ. ಮೊದಲ ODI ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 110 ರನ್ಗಳ ಅಲ್ಪಮೊತ್ತ ಬೆನ್ನತ್ತಿದ ರೋಹಿತ್ ಮತ್ತು ಧವನ್ ಜೋಡಿ, 114 ರನ್ಗಳಿಸುವ ಮೂಲಕ ಟೀಂ ಇಂಡಿಯಾಕ್ಕೆ 10 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು.
ಅಲ್ಲದೇ ಈ ಆರಂಭಿಕ ಜೋಡಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 5000 ರನ್ಗಳಿಸುವ ಮೂಲಕ ದಾಖಲೆಯ ಪುಟ ಸೇರಿತು. ರೋಹಿತ್ & ಶಿಖರ್ ಜೋಡಿ, 2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ನಂತರದ ದಿನಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ ಈ ಜೋಡಿ, ವಿಶ್ವ ಕ್ರಿಕೆಟ್ನ ಯಶಸ್ವಿ ಹಾಗೂ ಅಪಾಯಕಾರಿ ಜೋಡಿಯಾಗಿ ಮಿಂಚಿದ್ದಾರೆ.
ಅಲ್ಲದೇ ರೋಹಿತ್ ಶರ್ಮ ಹಾಗೂ ಶಿಖರ್ ಧವನ್, ODI ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿ ನಂತರದಲ್ಲಿ 5000 ರನ್ಗಳಿಸಿದ ಭಾರತದ 2ನೇ ಆರಂಭಿಕ ಜೋಡಿ ಎನಿಸಿದ್ದಾರೆ. ಸಚಿನ್ ಹಾಗೂ ಸೌರವ್, 1996-2007ರವರೆಗೆ ಓಪನರ್ಗಳಾಗಿ ಕಣಕ್ಕಿಳಿದಿದ್ದು, 6609 ರನ್ಗಳ ಜೊತೆಯಾಟವಾಡಿದ್ದಾರೆ. ಇವರ ಈ ಜೊತೆಯಾಟದಲ್ಲಿ 21 ಶತಕ ಹಾಗೂ 23 ಅರ್ಧಶತಕದ ಜೊತೆಯಾಟ ಕೂಡಿದೆ.