ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಗಮನ ಸೆಳೆದಿರುವ ರಿಷಬ್ ಪಂತ್, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದ ರಿಷಬ್ ಪಂತ್, ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲೂ ಬಿರುಸಿನ ಬ್ಯಾಟಿಂಗ್‌ನಿಂದಲೇ ಅಬ್ಬರಿಸುವ ಪಂತ್, ಕಿರಿಯ ವಯಸ್ಸಿನಲ್ಲೇ ಭಾರತದ ಪರ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಅತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಿಷಬ್ ಪಂತ್, ಭರ್ಜರಿ ಸಿಕ್ಸರ್‌ವೊಂದನ್ನ ಬಾರಿಸಿದರು. ಈ ಸಿಕ್ಸರ್ ಮೂಲಕ 100ನೇ ಸಿಕ್ಸರ್ ಸಿಡಿಸಿದ ರಿಷಬ್ ಪಂತ್, 24 ವರ್ಷ ವಯಸ್ಸಿನಲ್ಲಿ ಟೀಂ ಇಂಡಿಯಾ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿದ್ದಾರೆ.
ಭಾರತದ ಪರ ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಮಿಂಚುತ್ತಿರುವ ರಿಷಬ್ ಪಂತ್, ಮೂರು ಮಾದರಿ ಕ್ರಿಕೆಟ್‌ನಲ್ಲೂ ಬಿರುಸಿನ ಆಟದ ಮೂಲಕ ಅಬ್ಬರಿಸಿದ್ದಾರೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ 45*, ಏಕದಿನ ಕ್ರಿಕೆಟ್‌ನಲ್ಲಿ 24 ಹಾಗೂ ಟಿ20ಯಲ್ಲಿ 31 ಸಿಕ್ಸರ್ ಸಿಡಿಸುವ ಮೂಲಕ 100 ಸಿಕ್ಸರ್‌ಗಳ ಗಡಿದಾಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ಐಪಿಎಲ್‌ನಲ್ಲೂ ಸ್ಪೋಟಕ ಬ್ಯಾಟಿಂಗ್‌ನಿಂದ ಸದ್ದು ಮಾಡಿರುವ ಪಂತ್, ಈವರೆಗೂ 129 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಟೀಂ ಇಂಡಿಯಾ ಪರ 24ನೇ ವಯಸ್ಸಿನಲ್ಲಿ ಅತ್ಯಧಿಕ ಸಿಕ್ಸ್‌ಗಳನ್ನು ಸಿಡಿಸಿದ ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ರಿಷಬ್ ಪಂತ್ ಮೊದಲ ಸ್ಥಾನದಲ್ಲಿದ್ದರೆ. 99 ಸಿಕ್ಸರ್ ಸಿಡಿಸಿದ್ದ ಸುರೇಶ್ ರೈನಾ 2ನೇ ಹಾಗೂ ʼಕ್ರಿಕೆಟ್ ದೇವರುʼ ಸಚಿನ್ ತೆಂಡುಲ್ಕರ್ 98 ಸಿಕ್ಸರ್‌ಗಳನ್ನು ಸಿಡಿಸಿದ ಹೆಗ್ಗಳಿಕೆಯೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.