Durand Cup football – 2022 – ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬೆಂಗಳೂರು ಫುಟ್ ಬಾಲ್ ಕ್ಲಬ್
ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಎ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಮಹಮ್ಮಡನ್ ಸ್ಪೋಟ್ರ್ಸ್ ಕ್ಲಬ್ ತಂಡಗಳು 1-1ರಿಂದ ಡ್ರಾಗೆ ಸಮಧಾನಪಟ್ಟುಕೊಂಡವು.
ಪಂದ್ಯದ ಆರಂಭದಲ್ಲೇ ಮಹಮ್ಮದನ್ ತಂಡದ ಪರ ಪ್ರೀತಮ್ ಸಿಂಗ್ ಮೊದಲ ಗೋಲು ದಾಖಲಿಸಿ ಆರಂಭದ ಮುನ್ನಡೆ ಒದಗಿಸಿದ್ರು. ಆದ್ರೆ ಈ ಮುನ್ನಡೆಯನ್ನು ಬಿಎಫ್ ಸಿ ತಂಡದ ಶಿವಸಕ್ತಿ ನಾರಾಯಣನ್ ಅವರು ಸಮಗೊಳಿಸುವಲ್ಲಿ ಯಶಸ್ವಿಯಾದ್ರು.
ಇದೀಗ ಕ್ವಾರ್ಟರ್ ಫೈನಲ್ ನಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಒಡಿಸ್ಸಾ ಫುಟ್ ಬಾಲ್ ಕ್ಲಬ್ ತಂಡವನ್ನು ಎದುರಿಸಲಿದೆ. ಹಾಗೇ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ಮತ್ತು ಕೇರಳ ಬ್ಲ್ಯಾಸ್ಟರ್ಸ್ ತಂಡಗಳು ಇನ್ನೊಂದು ಕ್ವಾರ್ಟರ್ ಫೈನಲ್ ನಲ್ಲಿ ಹೋರಾಟ ನಡೆಸಲಿವೆ.
ಸೆಪ್ಟಂಬರ್ 3ರಂದು ನಡೆಯಲಿರುವ ಬಿ ಗುಂಪಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಮತ್ತು ಮುಂಬೈ ಸಿಟಿ ತಂಡಗಳು ಕಾದಾಟ ನಡೆಸಲಿವೆ.
ಹಾಗೇ ಸಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಆರ್ಮಿ ರೆಡ್ ಮನತ್ತು ಹೈದ್ರಬಾದ್ ಫುಟ್ ಬಾಲ್ ಕ್ಲಬ್ ತಂಡಗಳು ಹೋರಾಟ ನಡೆಸಲಿವೆ.
ಈಗಾಗಲೇ ಮುಂಬೈ ಸಿಟಿ ಫುಟ್ ಬಾಲ್ ಕ್ಲಬ್ ಮತ್ತು ಹೈದ್ರಬಾದ್ ಫುಟ್ ಬಾಲ್ ಕ್ಲಬ್ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.