Astrology – ಗರುಡ ಯಂತ್ರ ಧಾರಣೆಯಿಂದ ನಾಗದೋಷ, ಸರ್ಪ ದೋಷ ಪರಿಹಾರ… !
ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನ ಹಾಗೂ ಗೌರವವನ್ನು ನೀಡಲಾಗುತ್ತದೆ. ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾವುಗಳು ದೇವತೆಗಳೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಂಡಿವೆ.
ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ ಅಂಟಿಕೊಳ್ಳುವುದು. ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564
ದೀರ್ಘ ಸಮಯದ ನಂತರವಾದರೂ ಅಂದುಕೊಂಡ ಶಿಕ್ಷೆಯನ್ನು ನೀಡುವುದು ಎಂದು ನಂಬಲಾಗಿದೆ. ಕಾಳ ಸರ್ಪದೋಷವೆಂದು ನೀವು ಕೇಳಿರಬಹುದು, ಇದು ಮುಖ್ಯವಾಗಿ ಜನ್ಮಕುಂಡಲಿಯಲ್ಲಿನ ರಾಹು- ಕೇತುವಿನ ಸ್ಥಾನದಿಂದಾಗಿ ಕಂಡು ಬರುವ ದೋಷ. ಈ ದೋಷಗಳಲ್ಲೂ ಹಲವು ವಿಧಗಳಿವೆ ಅವು ಯಾವುವು ಹಾಗೂ ದೋಷ ನಿವಾರಣಾ ಪರಿಹಾರ ಕ್ರಮಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
ವ್ಯಕ್ತಿ ತನ್ನ ಜನ್ಮ ಕುಂಡಲಿಯ ಆಧಾರದ ಮೇಲೆ ಸರ್ಪ ಅಥವಾ ಕಾಳ ಸರ್ಪ ದೋಷ ಇರುವುದನ್ನು ಕಂಡುಕೊಳ್ಳಬಹುದು. ನಂತರ ಅದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ತಲೆ ದೂರುತ್ತವೆ. ಯಾರು ತಮ್ಮ ಜಾತಕ ಅಥವಾ ಕುಂಡಲಿಯನ್ನು ಹೊಂದಿರುವುದಿಲ್ಲವೋ ಅವರು ಸಹ ಕೆಲವು ಸೂಚನೆಗಳೊಂದಿಗೆ ಕಾಳ ಸರ್ಪ ದೋಷ ಇರುವುದನ್ನು ಗುರುತಿಸಿಕೊಳ್ಳಬಹುದು.
ನಿಜ, ನಿದ್ರೆಯಲ್ಲಿರುವಾಗ ಹಾವುಗಳ ಕನಸು ಕಾಣುವುದು, ಕನಸಿನಲ್ಲಿ ಮನೆಯು ಸಂಪೂರ್ಣವಾಗಿ ನೀರಿನಿಂದ ಮುಳುಗಿದಂತೆ ಕಾಣುವುದು, ಯಾರೋ ಅಪರಿಚಿತರು ತೊಂದರೆ ಕೊಡುವಂತೆ, ಮನೆಯು ಕಳ್ಳತನಕ್ಕೆ ಒಳಗಾಗಿರುವಂತೆ, ಆಸ್ತಿ ಪಾಸ್ತಿ ನಾಶ ಹೊಂದಿರುವಂತೆ,
ಆಪ್ತರು ಸಾವನ್ನು ಕಂಡಂತೆ ಹೀಗೆ ವಿವಿಧ ಬಗೆಯಲ್ಲಿ ಅಹಿತಕರವಾದ ಕನಸುಗಳು ಆಗಾಗ ಕಾಡುತ್ತಲೇ ಇರುತ್ತವೆ ಎಂದಾದರೆ ಅವರ ಜನ್ಮ ಕುಂಡಲಿಯಲ್ಲಿ ಕಾಳ ಸರ್ಪ ತೊಂದರೆ ಇದೆ ಎಂದು ಸುಲಭವಾಗಿ ನಿರ್ಧರಿಸಬಹುದು. ನಾಗ ಮತ್ತು ಕಾಳ ಸರ್ಪ ದೋಷ ಇರುವವರಿಗೆ ಮಾತ್ರ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುವುದು.
ಒಂದು ವೇಳೆ ನಿಮಗೆ ಏನಾದರೂ ಹಾವುಗಳಿಂದ ತೊಂದರೆ ಇದ್ದರೆ ಅಥವಾ ಎಲ್ಲಿಯಾದರೂ ನಿಮಗೆ ತಿಳಿಯದೆ ನಾಗರಹಾವನ್ನು ಹೊಡೆದು ಹಾಕಿದ್ದರೆ ಮತ್ತು ನಾಗರ ಹಾವಿನಿಂದ ನಿಮಗೆ ಅಪಾಯವಿದೆ ಎಂದು ಅನಿಸುತ್ತಿದ್ದರೆ, ನಾಗದೋಷವಿದ್ದರೆ ಆಗ ಈ ಗರುಡ ಯಂತ್ರವನ್ನು ಬರೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ.
ಒಂದು ತಾಮ್ರದ ತಗಡಿನಲ್ಲಿ ಈ ಯಂತ್ರವನ್ನು ಬರೆಯಬೇಕು ಈ ರೀತಿ ಬರೆಯುವುದಕ್ಕೂ ಮುನ್ನ ಪ್ರಾಣ ಪ್ರತಿಷ್ಠಾಪನೆ ಮಂತ್ರವನ್ನು ಹೇಳಬೇಕು ಹಾಗೂ ಶುದ್ಧೀಕರಣ ಮಾಡಬೇಕು. ಯಂತ್ರವನ್ನು ಬರೆದು ಒಂದು ತಾಮ್ರ ತಗಡಿನ ಒಳಗೆ ಹಾಕಬೇಕಾದರೆ ಅದರೊಳಗೆ ನಾಗಲಿಂಗನ ಗೆಡ್ಡೆ, ಬಿಳಿ ಗುಲಗಂಜಿ ಬೇರು, ಬಿಳಿ ಎಕ್ಕದ ಬೇರು, ನುಸುಗುನಿ ಬೇರು,ಮಹಾಲಿಂಗನ ಬೇರು ಈ ರೀತಿಯಾಗಿ ಈ ಎಲ್ಲಾ ಮೂಲಿಕೆಗಳನ್ನು ಹಾಕಬೇಕು.
ಇವೆಲ್ಲವನ್ನೂ ಹಾಕಿ ತಾಯತದ ರೂಪದಲ್ಲಿ ಮಾಡಿಕೊಳ್ಳಬೇಕು. ಈ ರೀತಿ ಮಾಡಿದ ನಂತರ ಆ ತಾಯತವನ್ನು ನೀವು ಧರಿಸಿಕೊಳ್ಳುವುದರಿಂದ ಸರ್ಪಗಳ ಭಯವು ಇರುವುದಿಲ್ಲ. ಈ ಯಂತ್ರವನ್ನು ಧರಿಸಿಕೊಳ್ಳುವುದರಿಂದ ಸರ್ಪದೋಷ, ನಾಗದೋಷ ಹಾಗು ಸರ್ಪಗಳಿಂದ ಬರುವ ತೊಂದರೆಗಳು ನಿವಾರಣೆ ಆಗುತ್ತದೆ. garuda mantra