Durand Cup 2022 – ಕ್ವಾರ್ಟರ್ ಫೈನಲ್ ನಲ್ಲಿ ಮಹಮ್ಮದನ್ – ಕೇರಳ ಬ್ಲ್ಯಾಸ್ಟರ್ಸ್ ಕಾದಾಟ

ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಸೆಪ್ಟಂಬರ್ 9ರಂದು ನಡೆಯಲಿದೆ.
ಕೊಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ಮತ್ತು ಕೇರಳ ಬ್ಲ್ಯಾಸ್ಟರ್ಸ್ ತಂಡಗಳು ಹೋರಾಟ ನಡೆಸಲಿವೆ.
ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡ ಈ ಬಾರಿಯ ಲೀಗ್ ನಲ್ಲಿ ಅಜೇಯ ತಂಡವಾಗಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಟ್ಟು ಹತ್ತು ಅಂಕಗಳನ್ನು ಪಡೆದುಕೊಂಡಿದೆ.
ಇನ್ನೊಂದೆಡೆ ಕೇರಳ ಬ್ಲ್ಯಾಸ್ಟರ್ಸ್ ತಂಡ ಕೂಡ ಡಿ ಬಣದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು.ನಾಲ್ಕು ಪಂದ್ಯಗಳಲ್ಲಿ ಏಳು ಅಂಕಗಳನ್ನು ಪಡೆದಿತ್ತು.
ಅಂದ ಹಾಗೇ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ಮತ್ತು ಕೇರಳ ಬ್ಲ್ಯಾಸ್ಟರ್ಸ್ ತಂಡಗಳು ಇದೇ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಉಭಯ ತಂಡಗಳ ನಡುವೆ ಹಳೆಯ ದಾಖಲೆಗಳು ಯಾವುದು ಕೂಡ ಇಲ್ಲ.
ಇನ್ನು ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡದಲ್ಲಿ ಪ್ರಮುಖ ಇಬ್ಬರು ಆಟಗಾರರು ಅಲಭ್ಯರಾಗಿದ್ದಾರೆ. ಸಮಾದ್ ಆಲಿ ಮಲ್ಲಿಕ್ ಗಾಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಭಿಷೇಕ್ ಹಲ್ಡೇರ್ ಅವರು ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ರೆಡ್ ಕಾರ್ಡ್ ಪಡೆದುಕೊಂಡಿದ್ದರು. ಇನ್ನು ಕೇರಳ ಬ್ಲ್ಯಾಸ್ಟರ್ಸ್ ತಂಡದಲ್ಲಿ ಯಾವುದೇ ಸಮಸ್ಯೆ ಇಲ್ಲ. ತಂಡದಲ್ಲಿ ಯಾವುದೇ ಬದಲಾವಣೆ ಕೂಡ ಇಲ್ಲ.
ಇನ್ನು ಇಂದಿನ ಪಂದ್ಯದಲ್ಲಿ ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಲ್ಲದೆ 2-0ಯಿಂದ ಗೆಲ್ಲುವ ನಿರೀಕ್ಷೆ ಇದೆ.
Mohammedan – Zothanmawia; Abhishek Ambekar, Ousmane N’Diaye, Shaher Shaheen, Vanlalzuidika; Abhash Thapa, Kean Lewis, Sheikh Faiaz, Pritam Singh; Marcus Joseph, Faslu Rahman
Kerala Blasters – Sachin Suresh; Marvaan Hussain, Tejas Krishna, Muhammed Basith, Aritra Das; Muhammed Azgar, Vibin Mahanan, Gaurav Kankonkar, Roshan Gigi; Muhammed Ajsal, Muhammed Aimen