BWF World Junior Rankings – ಅನುಪಮಾ ನಂಬರ್ ವನ್ ಆಟಗಾರ್ತಿ
ವಿಶ್ವ ಬ್ಯಾಡ್ಮಿಂಟನ್ ಜೂನಿಯರ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಅನುಪಮಾ ಉಪಾಧ್ಯಯ ಅವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
17ರ ಹರೆಯದ ಅನುಪಮಾ ಅವರು, ಪೊಲಿಶ್ ಓಪನ್ ಮತ್ತು ಉಗಾಂಡ ಜ್ಯೂನಿಯರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಹಾಗೇ ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಸೂಪರ್ ಇವೆಂಟ್ ನಲ್ಲಿ ಸೆಮಿಫೈನಲ್ ಮತ್ತು ಒರ್ಲಿನ್ಸ್ ಸೂಪರ್ 100 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಅಷ್ಟೇ ಅಲ್ಲ, ಅನುಪಮಾ ಅವರು ಈ ಸಾಧನೆ ಮಾಡಿದ್ದ ಭಾರತದ ಎರಡನೇ ಬಾಲಕಿ ಹಾಗೂ ಒಟ್ಟು ಆರನೇ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಬಾಲಕಿಯರ ಸಿಂಗಲ್ಸ್ ನಲ್ಲಿ ಈ ಹಿಂದೆ ತಸ್ನೀಮ್ ಮಿರ್ ಅವರು ನಂಬರ್ ವನ್ ಸ್ಥಾನವನ್ನು ಅಲಂಕರಿಸಿದ್ದರು.
ಇನ್ನುಳಿದಂತೆ 2014ರಲ್ಲಿ ಆದಿತ್ಯ ಶರ್ಮಾ, ಸಿರಿಲ್ ವರ್ಮಾ 2016, ಲಕ್ಷ್ಯ ಸೇನ್ 2017, ತಸ್ನೀಮ್ ಮಿರ್ 2022, ಸಂಕರ್ ಮುತ್ತುಸ್ವಾಮಿ ಸುಬ್ರಮನಿಯನ್ 2022 ಹಾಗೂ ಇದೀಗ ಅನುಪಮಾ ಉಪಾಧ್ಯಯ ಈ ಸಾಧನೆ ಮಾಡಿದ್ದಾರೆ
ಅಷ್ಟೇ ಅಲ್ಲ, ಅನುಪಮಾ ಅವರು ಮುಂದಿನ ಜೂನಿಯರ್ ವಿಶ್ವ ಚಾಂಪಿಯನ್ ಷಿಪ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ. ಅಕ್ಟೋಬರ್ 17ರಿಂದ 31ರವರೆಗೆ ಸ್ಪೇನ್ ನಲ್ಲಿ ಈ ಟೂರ್ನಿ ನಡೆಯಲಿದೆ.
Aditya Sharma (2014), Siril Verma (2016), Lakshya Sen (2017), Tasnim Mir (2022) and Sankar Muthusamy Subramanian (2022)