Durand Cup 2022 – ಅಗ್ರ ಸ್ಥಾನಕ್ಕಾಗಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಮಹಮ್ಮದನ್ ಫುಟ್ ಬಾಲ್ ಕ್ಲಬ್ ನಡುವೆ ಫೈಟ್
ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಜೆಮ್‍ಶೆಡ್ ಪುರ ಫುಟ್ ಬಾಲ್ ಕ್ಲಬ್ ತಂಡ 2-1 ಗೋಲುಗಳಿಂದ ಇಂಡಿಯನ್ ಏರ್ ಫೋರ್ಸ್ ತಂಡವನ್ನು ಪರಾಭವಗೊಳಿಸಿದೆ.
ಎ ಗುಂಪಿನ ಈ ಪಂದ್ಯದಲ್ಲಿ ಜೆಮ್‍ಶೆಡ್ ಪುರ ಫುಟ್ ಬಾಲ್ ಕ್ಲಬ್ ತಂಡ ಆರಂಭದಿಂದಲೇ ಹೊಂದಾಣಿಕೆಯ ಆಟವನ್ನಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಜೆಮ್‍ಶೆಡ್ ಪುರ ಫುಟ್ ಬಾಲ್ ಕ್ಲಬ್ ತಂಡದ ಪರ ಪಿಯೂಷ್ ಟಕ್ಹೂರಿ 26ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದ್ರೆ, ರೌಟ್ಮಾವಿಯಾ ಅವರು 84ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಡಿಯನ್ ಏರ್ ಫೋರ್ಸ್ ತಂಡದ ಪರ ಸೋಮಾ ಅವರು 39ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದ್ರು.
ಈ ಗೆಲುವಿನೊಂದಿಗೆ ಜೆಮ್‍ಶೆಡ್ ಪುರ ಫುಟ್ ಬಾಲ್ ಕ್ಲಬ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಆರು ಅಂಕಗಳನ್ನು ಪಡೆದುಕೊಂಡಿದೆ. ಒಟ್ಟಾರೆ ಲೀಗ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಟೂರ್ನಿಯಿಂದ ಹೊರಬಿದ್ದಿದೆ.
ಹಾಗೇ ಇಂಡಿಯನ್ ಏರ್ ಫೋರ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಸೋತು ಕೊನೆಯ ಸ್ಥಾನದಲ್ಲಿz (5ನೇ ಸ್ಸ್ಥಾನ ) ಗೋವಾ ಫುಟ್ ಬಾಲ್ ಕ್ಲಬ್ ತಂಡ ಕೂಡ ಒಂದು ಗೆಲುವು, ಒಂದು ಡ್ರಾ ಹಾಗೂ ಎರಡು ಸೋಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಎ ಬಣದಲ್ಲಿ ಮಹಮ್ಮದನ್ ಮತ್ತು ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿವೆ.
ಇಂದಿನ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಮಹಮ್ಮದನ್ ಫುಟ್ ಬಾಲ್ ಕ್ಲಬ್ ತಂಡಗಳ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಈಗಾಗಲೇ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದ್ರೆ ಮಹಮ್ಮದನ್ ಫುಟ್ ಬಾಲ್ ಕ್ಲಬ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಲೀಗ್ ನಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳಲು ಇಂದಿನ ಪಂದ್ಯದಲ್ಲಿ ಬಿಎಫ್‍ಸಿಗೆ ಗೆಲುವು ಅನಿವಾರ್ಯವಾಗಿದೆ.