Dubai open Tennis 2022 ದುಬೈ ಓಪನ್ ಟೂರ್ನಿಯಲ್ಲಿ ಆಡಲಿರುವ ಜಾಕೊವಿಕ್
ವಿಶ್ವ ನಂಬರ್ ವನ್ ಆಟಗಾರ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಮುಂದಿನ ತಿಂಗಳಿಂದ ಆರಂಭವಾಗಲಿರುವ ದುಬೈ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲಿದ್ದಾರೆ.
ದುಬೈ ಓಪನ್ ಟೂರ್ನಿಯಲ್ಲಿ ಜಾಕೊವಿಕ್ ಆಡುವುದನ್ನು ದುಬೈ ಓಪನ್ ಟೂರ್ನಿಯ ಸಂಘಟಕರು ಈಗಾಗಲೇ ಖಚಿತಪಡಿಸಿದ್ದಾರೆ. ಅಲ್ಲದೆ ಜಾಕೊವಿಕ್ ಅವರ ಅಧಿಕೃತ ವೆಬ್ ಸೈಟ್ ಕೂಡ ಸ್ಪಷ್ಟಪಡಿಸಿದೆ.
ಅಂದ ಹಾಗೇ ಜಾಕೊವಿಕ್ ಅವರ ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸರ್ಬಿಯಾದ ಜಾಕೊವಿಕ್ ಅವರು ಇನ್ನೂ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ಜಾಕೊವಿಕ್ ಅವರಿಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವ ಅವಕಾಶ ನೀಡಲಿಲ್ಲ. ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡುವ ಅವಕಾಶವಿದ್ರೂ ಆಸ್ಟ್ರೇಲಿಯಾ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದಲೂ ಜಾಕೊವಿಕ್ ಹೊರನಡೆದಿದ್ದರು.
Dubai open Tennis 2022 – NovakDjokovic set to return next month in Dubai
ಕೋವಿಡ್ ಲಸಿಕೆ ಪಡೆದುಕೊಳ್ಳುವುದಿಲ್ಲ ಎಂಬ ತಮ್ಮ ನಿಲುವಿಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಸಂಘಟಕರು ಕೂಡ ಅನುಮತಿ ನೀಡಲಿಲ್ಲ.
ಆದ್ರೆ ದುಬೈ ಓಪನ್ ಟೂರ್ನಿಯ ಆಯೋಜಕರು ನೊವಾಕ್ ಜಾಕೊವಿಕ್ ಅವರಿಗೆ ಆಡಲು ಅವಕಾಶ ನೀಡಿದ್ದಾರೆ. ಈಗಾಗಲೇ ಜಾಕೊವಿಕ್ ಅವರು 12 ಬಾರಿ ದುಬೈ ಓಪನ್ ಟೂರ್ನಿಯಲ್ಲಿ ಆಡಿದ್ದಾರೆ. ಇದರಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದೀಗ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಅಂದ ಹಾಗೇ ದುಬೈ ಓಪನ್ ಟೂರ್ನಿ ಫೆಬ್ರವರಿ 21ರಿಂದ ಆರಂಭವಾಗಲಿದೆ.