Australian Open 2022- ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಾಗಿ ಆಶ್ಲೇಘ್ ಬಾರ್ಟಿ ಮತ್ತು ಡೇನಿಯಲ್ ಕಾಲಿನ್ಸ್ ಕಾದಾಟ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮತ್ತೊಂದು ಸೆಮಿಫೈನಲ್ ನಲ್ಲಿ ಅಮೆರಿಕಾದ ಡೇನಿಯಲ್ ಕಾಲಿನ್ಸ್ ಅವರು ಜಯ ಸಾಧಿಸಿದ್ದಾರೆ.
ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೇನಿಯಲ್ ಕಾಲಿನ್ಸ್ ಅವರು ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಅವರನ್ನು ಎದುರಿಸಲಿದ್ದಾರೆ.
ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಡೇನಿಯಲ್ ಕಾಲಿನ್ಸ್ ಅವರು 6-4, 6-1ರಿಂದ ಐಗಾ ಸ್ವಿಟೆಕ್ ಅವರನ್ನು ಸುಲಭವಾಗಿ ಪರಾಭವಗೊಳಿಸಿದ್ರು.
28ರ ಹರೆಯದ ಡೇನಿಯಲ್ ಕಾಲಿನ್ಸ್ ಅವರು 2020ರ ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಿಟೆಕ್ ಅವರನ್ನು ಅಚ್ಚರಿಗೊಳಿಸಿದ್ರು. ಅಲ್ಲದೆ ಇದೇ ಮೊದಲ ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಸಾಧನೆ ಮಾಡಿದ್ದಾರೆ.
Australian Open 2022 – Danielle Collins to play Barty in Australian Open final
ಅಂದ ಹಾಗೇ ಡೇನಿಯಲ್ ಕಾಲಿನ್ಸ್ ಅವರು 2019ರಲ್ಲೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದ್ರೆ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಇನ್ನೊಂದೆಡೆ ಆಸ್ಟ್ರೆಲಿಯಾದ ಆಶ್ಲೇಘ್ ಬಾರ್ಟಿ ಅವರು ಮ್ಯಾಡಿಸನ್ ಕೈಸ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಆಶ್ಲೇಘ್ ಅವರು 44 ವರ್ಷಗಳ ಬಳಿಕ ಆಸ್ಟ್ರೇಲಿಯಾಗೆ ಪ್ರಶಸ್ತಿ ಗೆದ್ದುಕೊಡುವ ತವಕದಲ್ಲಿದ್ದಾರೆ.