ಏಷ್ಯಾಕಪ್ನಲ್ಲಿ (Asia Cup) ಟೀಮ್ ಇಂಡಿಯಾದಲ್ಲಿ (Team India) ಪ್ಲೇಯಿಂಗ್ 11 (Paying 11) ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರಿಗೆ ರಾಹುಲ್ ಬೇಕು, ಇನ್ನು ಕೆಲವರಿಗೆ ದಿನೇಶ್ ಕಾರ್ತಿಕ್ (Dinesh Karthik) ಬೇಕು.. ಮತ್ತೆ ಕೆಲವರಿಗೆ ರಿಷಬ್ ಪಂತ್ (Rishab Pant) ಆಡಬೇಕು. ಆದರೆ ಆಡುವ ತಂಡದಲ್ಲಿ ಎಲ್ಲರಿಗೂ ಸ್ಥಾನ ನೀಡಲು ಅಸಾಧ್ಯ. ಈಗ ಹಾಂಕಾಂಗ್ (Hongkong) ವಿರುದ್ಧದ ಪಂದ್ಯಕ್ಕೂ ಮೊದಲು ಮತ್ತೊಂದು ಡಿಸ್ಕಷನ್ ಶುರುವಾಗಿದೆ. ಜಸ್ಟ್ ಫಿನಿಷರ್ ಅನ್ನುವ ಕಾರಣಕ್ಕೆ ದಿನೇಶ್ ಕಾರ್ತಿಕ್ಗೆ ಸ್ಥಾನ ನೀಡುವ ಬದಲು ಡಿಪೆಂಡೆಬಲ್ ಬ್ಯಾಟರ್ ಅನ್ನುವ ಕಾರಣಕ್ಕೆ ರಿಷಬ್ಗೆ ಸ್ಥಾನ ನೀಡಿ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ.
ದಿನೇಶ್ ಕಾರ್ತಿಕ್ ತಂಡದಲ್ಲಿರುವುದರಿಂದ ಬ್ಯಾಟಿಂಗ್ ಡೆಪ್ತ್ ಹೆಚ್ಚುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಫಿನಿಷರ್ ಕಾರ್ಯ ಮಾಡಲು ಭಾರತ ತಂಡದಲ್ಲಿ ಹಲವರಿದ್ದಾರೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ಫಿನಿಷಿಂಗ್ ಪಂಟರ್ಗಳು. ಇವರ ಮಧ್ಯದಲ್ಲಿ ದಿನೇಶ್ ಕಾರ್ತಿಕ್ ಹೆಚ್ಚು ಶ್ರಮಪಡುವ ಅಗತ್ಯವಿಲ್ಲ. ಹೀಗಾಗಿ ದಿನೇಶ್ ಕಾರ್ತಿಕ್ಗೆ ಅಂತಿಮ ೧೧ ರಲ್ಲಿ ಸ್ಥಾನ ಬೇಡ ಅನ್ನುವ ವಾದವಿದೆ.
ರಿಷಬ್ ಪಂತ್ ಡಿಪೆಂಡೇಬಲ್ ಬ್ಯಾಟರ್. ಓಪನಿಂಗ್,ಟಾಪ್ ಆರ್ಡರ್, ಮಿಡಲ್ ಆರ್ಡರ್ ಜೊತೆಗೆ ಲೋವರ್ ಆರ್ಡರ್.. ಹೀಗೆ ಎಲ್ಲಿ ಬೇಕೋ ಅಲ್ಲಿ ಆಡಬಲ್ಲರು. ಎಡಗೈ ಬ್ಯಾಟ್ಸ್ಮನ್ ಆಗಿರುವ ರಿಷಬ್ ವೆರೈಟಿ ಕೂಡ ತಂದುಕೊಡುತ್ತಾರೆ. ಸ್ಪಿನ್ನರ್ಗಳು ಪ್ರಾಬಲ್ಯ ಮೆರೆಯುವ ಮಿಡಲ್ ಓವರ್ಗಳಲ್ಲಿ ರಿಷಬ್ ಬೆಸ್ಟ್ ಚಾಯ್ಸ್. ಯಾಕಂದರೆ ಸ್ಪಿನ್ನರ್ಗಳ ಮುಂದೆ ರಿಷಬ್ ಬೌಂಡರಿ, ಸಿಕ್ಸರ್ಗಳನ್ನು ಸರಾಗವಾಗಿ ಬಾರಿಸುತ್ತಾರೆ.
ಕೀಪಿಂಗ್ ವಿಚಾರಕ್ಕೆ ಬಂದರೆ ಕಾರ್ತಿಕ್ ಸೇಫ್ ಹ್ಯಾಂಡ್ ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಇತ್ತೀಚೆಗೆ ಕಾರ್ತಿಕ್ ಕೀಪಿಂಗ್ನಲ್ಲಿ ಎಡವುತ್ತಿದ್ದಾರೆ. ರಿಷಬ್ ಕೀಪಿಂಗ್ನಲ್ಲಿ ಸುಧಾರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸ್ಪಿನ್ನರ್ಗಳ ಮುಂದೆ ಬೆಸ್ಟ್ ಆಗಿಯೂ ಕಾಣುತ್ತಾರೆ. ಹೀಗಾಗಿ ಇಲ್ಲೂ ರಿಷಬ್ ಕಾರ್ತಿಕ್ಗಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಾರೆ.
ಟೀಮ್ ಇಂಡಿಯಾ ರಿಷಬ್ ಪಂತ್ ರನ್ನು ಆಡಿಸಬೇಕಾದರೆ ಒಂದೋ ಕೆ.ಎಲ್. ರಾಹುಲ್ ರನ್ನು ಹೊರಗೆ ಇಡಬೇಕು. ಇಲ್ಲ ದಿನೇಶ್ ಕಾರ್ತಿಕ್ಗೆ ಗೇಟ್ಪಾಸ್ ಕೊಡಬೇಕು. ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ತಲೆಯಲ್ಲಿ ಏನು ಐಡಿಯಾ ಇದೆಯೋ ಯಾರಿಗೆ ಗೊತ್ತು?