IPL 2022 ರ ಎರಡನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೆಂಟ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಚೆನ್ನೈ ತಂಡದ ಸ್ಟಾರ್ ಆಟಗಾರರು ತಂಡಕ್ಕೆ ನೆರವಾದರು. ಐಪಿಎಲ್ ನಲ್ಲಿ ಹಲವು ದಾಖಲೆಗಳಿಗೆ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಸಹ ಸಮಯೋಚಿತ ಆಟ ಪ್ರದರ್ಶಿಸಿದರು. ಕೇವಲ ಆರು ಎಸೆತಗಳಲ್ಲಿ 16 ರನ್ ಸಿಡಿಸಿದ ಮಾಹಿ ಅಬ್ಬರಿಸಿದರು.
ಪ್ರಸಕ್ತ ಐಪಿಎಲ್ ನಲ್ಲಿ ಉತ್ತಮ ಲಯದಲ್ಲಿ ಕಾಣುತ್ತಿರುವ ಧೋನಿ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಧೋನಿ ಸಾಮಾನ್ಯವಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ಐಪಿಎಲ್ನಲ್ಲೂ ಇದೇ ಕ್ರಮಾಂಕದಲ್ಲಿ ಮುಂದುವರೆದಿದ್ದಾರೆ. ಈ ಲೀಗ್ನಲ್ಲಿ, ಡೆತ್ ಓವರ್ಗಳಲ್ಲಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಧೋನಿ ನಂಬರ್ ಒನ್ ಬ್ಯಾಟ್ಸ್ಮನ್.
ಎಂಎಸ್ ಧೋನಿ 2008 ರಿಂದ ಐಪಿಎಲ್ನ ಭಾಗವಾಗಿದ್ದಾರೆ. ಮತ್ತು ಇಲ್ಲಿಯವರೆಗೆ ಈ ಲೀಗ್ನಲ್ಲಿ ಡೆತ್ ಓವರ್ಗಳಲ್ಲಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಅವರು ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಧೋನಿ ಡೆತ್ ಓವರ್ಗಳಲ್ಲಿ ಒಟ್ಟು 2420 ರನ್ ಗಳಿಸಿದ್ದಾರೆ. ಇದೇ ಸಮಯದಲ್ಲಿ, ಡೆತ್ ಓವರ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ 1618 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ 1421 ರನ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಮುಂಬೈ ನಾಯಕ ರೋಹಿತ್ ಶರ್ಮಾ 1145 ರನ್ ಗಳಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
RCB ವಿಕೆಟ್ಕೀಪರ್- ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಐಪಿಎಲ್ 2022 ರಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದಾರೆ. ಮತ್ತು ಅವರು ತಮ್ಮ ತಂಡಕ್ಕಾಗಿ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗ ಡೆತ್ ಓವರ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಐದನೇ ಸ್ಥಾನದಲ್ಲಿದ್ದಾರೆ. ಕಾರ್ತಿಕ್ ಐಪಿಎಲ್ನಲ್ಲಿ ಡೆತ್ ಓವರ್ಗಳಲ್ಲಿ 1086 ರನ್ ಗಳಿಸಿದ್ದಾರೆ.
ಐಪಿಎಲ್ನಲ್ಲಿ ಡೆತ್ ಓವರ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು
2414 ರನ್ – ಎಂಎಸ್ ಧೋನಿ
1618 ರನ್ – ಕೀರಾನ್ ಪೊಲಾರ್ಡ್
1421 ರನ್ – ಎಬಿ ಡಿವಿಲಿಯರ್ಸ್
1145 ರನ್ – ರೋಹಿತ್ ಶರ್ಮಾ
1086 ರನ್ – ದಿನೇಶ್ ಕಾರ್ತಿಕ್