ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ IPL 2022 ರಲ್ಲಿ ಅತ್ಯಂತ ನಿರಾಶಾದಾಯಕ ಆರಂಭವನ್ನು ಪಡೆದಿದೆ. ಆಟಗಾರರ ಗಾಯಗಳಿಂದ ತೊಂದರೆಗೀಡಾದ CSK ಮೊದಲ ಎರಡು ಪಂದ್ಯಗಳಲ್ಲಿ ಸೋಲುವ ಕಂಡಿದೆ. ಆರಂಭಿಕ ಪಂದ್ಯದಲ್ಲಿ KKR ಗೆ ವಿರುದ್ಧ, ನಂತರ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಆಘಾತ ಅನುಭವಿಸಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ಮೊದಲೆರಡು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲು. ಹಾಲಿ ಚಾಂಪಿಯನ್ ಸಿಎಸ್ಕೆ ದೀಪಕ್ ಚಹಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ.
ಐಪಿಎಲ್ 2022 ಹರಾಜಿನಲ್ಲಿ 14 ಕೋಟಿಗೆ ಮಾರಾಟವಾದ ದೀಪಕ್ ಚಹಾರ್ ಪ್ರಸ್ತುತ ಎನ್ಸಿಎಯಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ. ವರದಿಯ ಪ್ರಕಾರ, ದೀಪಕ್ ಚಹಾರ್ ಎರಡು ವಾರಗಳ ನಂತರ ಎನ್ಸಿಎಯಿಂದ ಬಿಡುಗಡೆಯಾಗುತ್ತಾರೆ. ಮತ್ತು ಅವರು ಮತ್ತೆ ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಸೇರುತ್ತಾರೆ. ಎಲ್ಲವೂ ಸರಿಯಾಗಿ ನಡೆದರೆ, ಏಪ್ರಿಲ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ದೀಪಕ್ ಐಪಿಎಲ್ 2022 ರ ಮೊದಲ ಪಂದ್ಯವನ್ನು ಆಡಬಹುದು.
ದೀಪಕ್ ಚಹಾರ್ ಹೊರತುಪಡಿಸಿ, ಆಡಮ್ ಮಿಲ್ನೆ ಮತ್ತು ಕ್ರಿಸ್ ಜೋರ್ಡಾನ್ ಅವರ ಫಿಟ್ನೆಸ್ ಸಮಸ್ಯೆ ಸಿಎಸ್ಕೆ ತಂಡಕ್ಕೆ ತಲೆ ನೋವಾಗಿದೆ. ಕೆಕೆಆರ್ ವಿರುದ್ಧದ ಮೊದಲ ಪಂದ್ಯದ ವೇಳೆ ಆಡಮ್ ಮಿಲ್ನೆ ಗಾಯಗೊಂಡಿದ್ದರೆ, ಟಾನ್ಸಿಲ್ ಸೋಂಕಿನಿಂದ ಕ್ರಿಸ್ ಜೋರ್ಡಾನ್ 6 ದಿನಗಳ ಕಾಲ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು.
ಋತುವಿನ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮೂರನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 3 ರಂದು ಆಡಲಿದೆ. ಈ ಪಂದ್ಯದಲ್ಲಿ ಗೆಲುವ ಸಾಧಿಸುವ ಪ್ಲಾನ್ ಚೆನ್ನೈ ತಂಡದ್ದಾಗಿದೆ.