Womens Asia Cup 2022 – : ಮಲೇಷಿಯಾವನ್ನು ಸೋಲಿಸಿದ ಭಾರತ, ಡಕ್ವರ್ತ್ ನಿಯದಲ್ಲಿ ಜಯಭೇರಿ
ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಮಹಿಳಾ ಏಷ್ಯಾಕಪ್ (Womens Asia Cup Tournament) ಟೂರ್ನಿಯಲ್ಲಿ ಭಾರತ (India womens team ) ಸತತ ಎರಡನೇ ಜಯ ದಾಖಲಿಸಿದೆ. ಮಲೇಷಿಯಾ (Malasia womens team ) ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ ಪಡಸಿದರೂ ಡಕ್ವರ್ತ್ ನಿಯಮದಂತೆ (Duckworth Rule) 30 ರನ್ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ (Ind) ಸುಬ್ಬನೇನಿ ಮೇಘನಾ (Subbaneni Meghana) (69 ರನ್ 53 ಎಸೆತ, 11 ಫೋರ್, 1 ಸಿಕ್ಸರ್), ಮತ್ತು ಶಫಾಲಿ ವರ್ಮಾ (Shafali Verma) (46 ರನ್, 39 ಎಸೆತ 1 ಫೋರ್ , 3 ಸಿಕ್ಸರ್) 116 ರನ್ಗಳ ಭರ್ಜರಿ ಆರಂಭ ತಂದುಕೊಟ್ಟರು. ಭಡ್ತಿ ಪಡೆದು ಬಂದ ರಿಚಾ ಘೋಷ್ ಅಜೇಯ 33 ರನ್ (19 ಎಸೆತ, 5 ಫೋರ್, 1 ಸಿಕ್ಸರ್) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಕಿರನ್ ಪ್ರಭು ನವ್ಗಿರೆ (0) ಮತ್ತು ರಾಧಾ ಯಾದವ್ (8) ಹೆಚ್ಚು ಹೊತ್ತು ನಿಲ್ಲಲಿಲ್ಲ. ನಿಗದಿತ 20 ಓವರುಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 181 ರನ್ಗಳಿಸಿತ್ತು.
ಮಲೇಷಿಯಾ ಇನ್ನಿಂಗ್ಸ್ ಆರಂಭದ ವೇಳೆಯಲ್ಲೇ ಮಳೆಯ ಭೀತಿ ಎದುರಾಗಿತ್ತು (Rain Curtailed match). ಆದರೆ ಬುದ್ಧಿವಂತಿಕೆ ಪ್ರದರ್ಶಿಸಿದ ನಾಯಕಿ ಹರ್ಮನ್ಪ್ರಿತ್ ಕೌರ್ (Harmanpreet Kaur) ಮೊದಲ ಐದು ಓವರುಗಳನ್ನು ಸ್ಪಿನ್ನರ್ಗಳಿಂದ ಮಾಡಿಸಿದರು. ಅಷ್ಟೇ ಅಲ್ಲ ದೀಪ್ತಿ ಶರ್ಮಾ ಮತ್ತು ರಾಜೇಶ್ವರಿ ಗಾಯಾಕ್ವಾಡ್ 2 ವಿಕೆಟ್ ಕೂಡ ಕಬಳಿಸಿದರು. ಮಲೇಷಿಯಾ 5.2 ಓವರುಗಳಲ್ಲಿ 2 ವಿಕೆಟ್ ಕಳೆದಯಕೊಂಡು 16 ರನ್ಗಳಿಸಿದ್ದಾಗ ಮಳೆ ಸುರಿಯಿತು. ಪಂದ್ಯ ಅಲ್ಲಿಗೆ ಅಂತ್ಯ ಕಂಡಾಗ ಭಾರತ ಡಕ್ವರ್ತ್ ಲೂಯಿಸ್ ನಿಯಮದಂತೆ 30 ರನ್ಗಳ ಜಯ ಸಾಧಿಸಿತು.