ದೆಹಲಿಯ ಜಿಮ್ಖಾನಾ ಕ್ಲಬ್ನಲ್ಲಿ ಶುಕ್ರವಾರ ನಡೆದ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಪ್ಲೇ ಆಫ್ 1 ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದ್ದು 2-0 ಮುನ್ನಡೆ ಸಾಧಿಸಿದೆ.
ಶುಕ್ರವಾರ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರಾಮ್ ಕುಮಾರ್ ರಾಮನಾಥನ್ ಅವರು ಸೊಗಸಾದ ಆಟವಾಡಿ ಮುನ್ನಡೆ ಸಾಧಿಸಿದರು. ಇವರು ಮೊದಲ ಪಂದ್ಯದಲ್ಲಿ 6-3, 6-2 ರಿಂದ ಎದುರಾಳಿ ತಂಡದ ಸಿಗ್ಸ್ಗಾರ್ಡ್, ಕ್ರಿಶ್ಚಿಯನ್ ಅವರನ್ನು 59 ನಿಮಿಷಗಳ ಹೋರಾಟದಲ್ಲಿ ಮಿಂಚಿದರು. ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿದ ರಾಮನಾಥನ್ ಎಸ್ ಮೂಲಕ 5 ಅಂಕಗಳನ್ನು ಸೇರಿಸಿದರು. ಅಲ್ಲದೆ ಮೊದಲ ಸರ್ವ್ ಹಾಗೂ ಎರಡನೇ ಸರ್ವ ಮುಖಾಂತರ ಅಂಕಗಳನ್ನು ಬಾಚಿಕೊಂಡರು.
ಮೊದಲ ಸೆಟ್ ನಲ್ಲಿ ರಾಮ್ ಕುಮಾರ್ ಮೊದಲ ಅಂಕದ ನಗೆ ಬೀರಿದರು. ಆದರೆ ಎದುರಾಳಿ ಆಟಗಾರ ಸಹ ಅಂಕ ಸೇರಿಸಿದರು. ಬಳಿಕ ರಾಮ್ ಕುಮಾರ್ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿ, 4-1 ರಿಂದ ಮುನ್ನಡೆ ಸಾಧಿಸಿದರು. ಆದರೆ ರಾಮ್ ಕುಮಾರ್ ಮನಮೋಹಕ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು.
ಎರಡನೇ ಸೆಟ್ ನ ಆರಂಭದಲ್ಲಿ ಭರ್ಜರಿ ಆರಂಭ ಪಡೆದ ಡೆನ್ಮಾರ್ಕ್ ಆಟಗಾರ ಮುನ್ನಡೆ ಸಾಧಿಸಿದರು. ಅಲ್ಲದೆ ಪಂದ್ಯದಲ್ಲಿ ಪುಟಿದೆದ್ದ ರಾಮ್ ಕುಮಾರ್ ಹಂತ ಹಂತವಾಗಿ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿ ಗೆಲುವು ಸಾಧಿಸಿದರು. ಅಲ್ಲದೆ ಭಾರತ 1-0 ಯಿಂದ ಮುನ್ನಡೆ ಸಾಧಿಸಿದರು.
590ನೇ ಶ್ರೇಯಾಂಕ ಹೊಂದಿರುವ ಯೂಕಿ ಭಾಂಬ್ರಿ 6-4, 6-4 ರಿಂದ ಒಂದು ಗಂಟೆ 27 ನಿಮಿಷದ ಹೋರಾಟದಲ್ಲಿ ಡೆನ್ಮಾರ್ಕ್ನ ಮೈಕೆಲ್ ಟಾರ್ಪೆಗಾರ್ಡ್ ಅವರನ್ನು ಮಣಿಸಿ ಬೀಗಿದರು. ಈ ಪಂದ್ಯದಲ್ಲಿ ಯಾವುದೇ ಹಂತದಲ್ಲೂ ಎದುರಾಳಿ ಆಟಗಾರ ಭಾರತೀಯ ಆಟಗಾರನಿಗೆ ಸವಾಲು ಎಸೆಯಲಿಲ್ಲ. ಪರಿಣಾಮ ಭಾರತ 2-0ಯಿಂದ ಮುನ್ನಡೆ ಸಾಧಿಸಿದೆ.